
ಮೈಸೂರು
ಬಸ್ ನಿಲ್ದಾಣದ ಬಳಿ ಯುವಕನ ಮೃತದೇಹ ಪತ್ತೆ : ನಂಜನಗೂಡಿನಲ್ಲಿ ಘಟನೆ
ಮೈಸೂರು,ನ.4:- ನಂಜನಗೂಡು ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ಯುವಕನೋರ್ವನ ಮೃತದೇಹ ಪತ್ತೆಯಾಗಿದೆ.
ಶವವಾಗಿ ಪತ್ತೆಯಾದ ಯುವಕನನ್ನು ಪ್ರದೀಪ್ (21) ಎಂದು ಗುರುತಿಸಲಾಗಿದ್ದು, ಈತ ನಂಜನಗೂಡು ಪಟ್ಟಣದ ಕೇಕ್ ವರ್ಲ್ಡ್ ಬೇಕರಿಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ನಿನ್ನೆ ಬೇಕರಿ ಮಾಲಿಕನಿಂದ ರಜೆ ಪಡೆದು ಮೈಸೂರಿಗೆ ಸ್ನೇಹಿತರ ಜೊತೆ ಹೋಗಿದ್ದ ಎನ್ನಲಾಗುತ್ತಿದೆ.
ನಂಜನಗೂಡು ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ವಾಹನ ಸಮೇತ ಯುವಕನ ಮೃತದೇಹ ಪತ್ತೆಯಾಗಿದ್ದು, ಸ್ಥಳಕ್ಕೆ ನಂಜನಗೂಡು ಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಸಂಬಂಧ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)