ಪ್ರಮುಖ ಸುದ್ದಿ

ಪರಿಸರವಾದಿ, ನಿವೃತ್ತ ಕರ್ನಲ್‌ ಮುತ್ತಣ್ಣ ಮೇಲೆ ಕಾಡಾನೆ ದಾಳಿ : ಆಸ್ಪತ್ರೆಗೆ ದಾಖಲು

ರಾಜ್ಯ( ಮಡಿಕೇರಿ)ನ.5:- ಕೊಡಗು ವೈಲ್ಡ್‌ ಲೈಫ್ ಸೊಸೈಟಿ ಅಧ್ಯಕ್ಷ, ಪರಿಸರವಾದಿ, ನಿವೃತ್ತ ಕರ್ನಲ್‌ ಮುತ್ತಣ್ಣ ಅವರ ಮೇಲೆ ಕಾಡಾನೆಯೊಂದು ದಾಳಿ ಮಾಡಿದ ಪರಿಣಾಮ ಕಾಲು ಮುರಿತಕ್ಕೊಳಗಾಗಿರುವ ಅವರನ್ನು ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಾಲಿಬೆಟ್ಟದಲ್ಲಿರುವ ತಮ್ಮ ತೋಟಕ್ಕೆ ಮುತ್ತಣ್ಣ ಅವರು ತೆರಳುತ್ತಿದ್ದಾಗ ಏಕಾಏಕಿ ಎದುರಿನಿಂದ ಬಂದ ಒಂಟಿ ಸಲಗ ದಾಳಿ ನಡೆಸಿದೆ. ಈ ಸಂದರ್ಭ ಓಡುವಾಗ ಕೆಳಗೆ ಬಿದ್ದ ಮುತ್ತಣ್ಣ ಅವರ ಕಾಲು ಮುರಿತಕ್ಕೊಳಗಾಗಿದ್ದು, ತೋಟದಲ್ಲಿದ್ದ ಕಾರ್ಮಿಕರು ಗೋಣಿಕೊಪ್ಪ ಆಸ್ಪತ್ರೆಗೆ ಕರೆದೊಯ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: