ಮೈಸೂರು

ಮಹದೇವನಗರದಲ್ಲಿ ಮತದಾನ ಬಹಿಷ್ಕಾರ : ಜನಪ್ರತಿನಿಧಿಗಳ ಮೇಲೆ ಆಕ್ರೋಶ

ನಂಜನಗೂಡು ವಿಧಾನಸಭಾ ಕ್ಷೇತ್ರದ ಮಹದೇವನಗರದಲ್ಲಿನ ಮತಗಟ್ಟೆಯಲ್ಲಿ ಮಾತ್ರ ಯಾರೂ ಒಂದು ಮತವನ್ನೂ ಇದುವರೆಗೂ ಚಲಾಯಿಸಿಲ್ಲ.  ಅಲ್ಲಿನ  ಗ್ರಾಮಸ್ಥರು  ಮಧ್ಯಾಹ್ನ ಒಂದುಗಂಟೆಯಾದರೂ ಯಾರೂ ಮತಗಟ್ಟೆಗೆ ತೆರಳಿಲ್ಲ. ಅಲ್ಲಿ ಒಂದೇ ಒಂದು ಮತವೂ ಚಲಾವಣೆಯಾಗಿಲ್ಲ.

ವೀರದೇವನಪುರದಲ್ಲಿ ಮತಗಟ್ಟೆಯಿದ್ದು, ಅಲ್ಲಿಗೆ ತೆರಳಲು ಗ್ರಾಮಸ್ಥರು ಮೂರು ಕಿಲೋಮೀಟರ್ ನಡೆಯಬೇಕಿದೆ. ಇದುವರೆಗೂ ಮೂಲಭೂತ ಸೌಕರ್ಯಗಳಿಂದ ಇಲ್ಲಿನ ಗ್ರಾಮಸ್ಥರು ವಂಚಿತರಾಗುತ್ತಲೇ ಇದ್ದಾರೆ. ಮತದಾನ ನಿಮ್ಮ ಹಕ್ಕು ಯಾಕೆ ಅದನ್ನು ಮಾಡುತ್ತಿಲ್ಲ ಎಂದು ಹೇಳುತ್ತಿರುವವರ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಾವಿಲ್ಲಿ ಎಷ್ಟು ವರ್ಷದಿಂದ ಬದುಕು ಸವೆಸುತ್ತಿದ್ದೇವೆ. ಪಡಿತರವನ್ನು ತೆಗೆದುಕೊಳ್ಳಲು ಮೂರು ಕಿಲೋಮೀಟರ್ ಹೋಗಬೇಕು. ಎಲ್ಲರ ಬಳಿಯೂ ನಮಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಿ ಎಂದು ಹೇಳಿ, ಹೇಳಿ ಸಾಕಾಯಿತು. ಯಾವೊಬ್ಬ ಜನಪ್ರತಿನಿಧಿಯೂ ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ. ಮತ್ತೆ ಯಾಕೆ ಅವರಿಗೆ ಮತವನ್ನು ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮತದಾನದಿಂದ ದೂರವೇ ಉಳಿದ ಇಲ್ಲಿನ ಗ್ರಾಮಸ್ಥರು ಬಹುತೇಕ ಮತದಾನವನ್ನು ಬಹಿಷ್ಕರಿಸಿದಂತಿದೆ. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: