ಪ್ರಮುಖ ಸುದ್ದಿಮನರಂಜನೆ

ಅಶ್ಲೀಲ ವಿಡಿಯೋ ಚಿತ್ರೀಕರಣ :ನಟಿ ಪೂನಂ ಪಾಂಡೆ ಬಂಧನ

ದೇಶ(ಗೋವಾ)ನ.5:- ಗೋವಾ ಪೊಲೀಸರು ಸರ್ಕಾರಕ್ಕೆ ಸೇರಿದ ಪ್ರದೇಶಕ್ಕೆ ಅತಿಕ್ರಮಣ ಪ್ರದೇಶವೂ ಅಲ್ಲದೇ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿದ್ದಕ್ಕಾಗಿ ನಟಿ ಪೂನಂ ಪಾಂಡೆಯನ್ನು ಬಂಧಿಸಿದ್ದಾರೆ.
ಗೋವಾದ ಕೆನಕೋನಾ ಟೌನ್ ನಲ್ಲಿನ ಸರ್ಕಾರಿ ಯಂತ್ರವನ್ನು ಶೂಟಿಂಗ್ ಗೆ ಬಳಸಿಕೊಂಡಿರುವ ಆರೋಪ ನಟಿ ಪೂನಂ ಪಾಂಡೆ ವಿರುದ್ಧ ಕೇಳಿಬಂದಿದೆ.
ಕೆನಕೋನಾದ ನಾಗರಿಕರು ದೂರು ದಾಖಲಿಸಿದ ಬಳಿಕ ಪೊಲೀಸರು ಕ್ರಮ ಕೈಗೊಂಡಿದ್ದು, ಕರ್ತವ್ಯ ಲೋಪದ ಆರೋಪದಡಿ ಇಬ್ಬರು ಪೊಲೀಸ್ ಅಧಿಕಾರಿಗಳನ್ನೂ ಅಮಾನತುಗೊಳಿಸಲಾಗಿದೆ.
ಪೂನಂ ಪಾಂಡೆಯನ್ನು ರಕ್ಷಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೂ ಸಹ ಸ್ಥಳೀಯರು ಆಗ್ರಹಿಸಿದ್ದರು. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: