ಮೈಸೂರು

ಅರ್ನಬ್ ಗೋಸ್ವಾಮಿ ಬಂಧನ ಖಂಡಿಸಿ ಎಬಿವಿಪಿ ಪ್ರತಿಭಟನೆ

ಮೈಸೂರು,ನ.6:- ರಿಪಬ್ಲಿಕ್ ಸುದ್ದಿ ದೃಶ್ಯ ವಾಹಿನಿಯ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಬಂಧನವನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೈಸೂರು ವತಿಯಿಂದ ಪ್ರತಿಭಟನೆ ನಡೆಯಿತು.
ಜಿಲ್ಲಾಧಿಕಾರಿಗಳ ಕಛೇರಿ ಎದುರು ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಮೂಲಭೂತ ಸ್ವಾತಂತ್ರ್ಯದ ಮೇಲೆ ತುರ್ತು ಪರಿಸ್ಥಿತಿಯ ಹೇರಿಕೆ ದಾಳಿಯಾಗಿದೆ ಎಂದು ಆರೋಪಿಸಿದರು. ಅರ್ನಬ್ ಗೋಸ್ವಾಮಿ ಅವರನ್ನು ಅವರ ನಿವಾಸದಿಂದ ಬುಧವಾರ ಬೆಳಿಗ್ಗೆ ಬಂದಿಸಿರುವುದು ತುರ್ತು ಪರಿಸ್ಥಿತಿಯ ದಿನಗಳಲ್ಲಿ ಮೌಲಿಕ ಸ್ವಾತಂತ್ರ್ಯದ ಮೇಲೆ ದಾಳಿ ಮಾಡಿದ ಹಾಗಿದೆ. ಕಾನೂನು ಬಾಹಿರವಾಗಿ ಬಂಧಿಸಿರುವುದು ಇಡೀ ದೇಶದ ಪತ್ರಿಕಾ ಸ್ವಾತಂತ್ರ್ಯವನ್ನು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮುಗಿಸುವ ಷಡ್ಯಂತ್ರವಾಗಿದೆ. ಅರ್ನಬ್ ಗೋಸ್ವಾಮಿ ಪಾಲಘರ್ ನಲ್ಲಿ ಸಾಧುಗಳ ಹತ್ಯೆ ನಡೆದಿರುವ ಬಗ್ಗೆ ಮತ್ತು ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಅನೇಕ ಕಾನೂನು ಬಾಹಿರ ಕೃತ್ಯಗಳ ಕುರಿತಾಗಿ ರಾಜ್ಯ ಸರ್ಕಾರಕ್ಕೆ ಕನ್ನಡಿ ತೋರಿಸಿದ್ದರು. ಈ ಎಲ್ಲ ಘಟನೆಗಳನ್ನು ವರದಿ ಮಾಡಿರುವುದು ಪ್ರಜಾಪ್ರಭುತ್ವದಲ್ಲಿ ಸರ್ಕಾರಕ್ಕೆ ಅಶೋಭನೀಯವಾಗಿದೆ. ಮಹಾರಾಷ್ಟ್ರ ಪೊಲೀಸರಿಂದ ತನಿಖೆಯ ನಂತರ 2018ರಲ್ಲಿ ನಡೆದ ಆತ್ಮಹತ್ಯೆಯ ಕೇಸ್ ಅಂತ್ಯಕಂಡಿತ್ತು. ಆದರೆ ಸೇಡು ತೀರಿಸಿಕೊಳ್ಳುವ ಉದ್ದೇಶಕ್ಕಾಗಿ ಆ ಕೇಸನ್ನು ಮತ್ತೆ ಓಪನ್ ಮಾಡಿ ಮಹಾರಾಷ್ಟ್ರ ಸರ್ಕಾರವು ತನ್ನ ಪ್ರಜಾ ಪ್ರಭುತ್ವ ವಿರೋಧಿ ಮುಖವಾಡವನ್ನು ಬಯಲು ಮಾಡಿಕೊಂಡಿದೆ. ಬಂಧನದ ಸಂದರ್ಭದಲ್ಲಿ ಅರ್ನಾಬ್ ಗೋಸ್ವಾಮಿಯವರ ಮನೆಯ ಸದಸ್ಯರೊಂದಿಗೆ ಪೊಲೀಸರು ನಡೆದುಕೊಂಡ ವರದಿಯು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿನ ಭಯಾನಕ ಕರಾಳ ದಿನಗಳನ್ನು ನೆನಪಿಸಿಕೊಡುತ್ತವೆ. ಅರ್ನಬ್ ಗೋಸ್ವಾಮಿ ಬಂಧನವು ಮಹಾರಾಷ್ಟ್ರದಲ್ಲಿನ ಮೌಲಿಕ ಸ್ವಾತಂತ್ರ್ಯದ ಮೇಲಿನ ದೌರ್ಜನ್ಯ ಮತ್ತು ರಾಜ್ಯ ಸರ್ಕಾರದ ಪ್ರಜಾ ಪ್ರಭುತ್ವ ವಿರೋಧಿ ಮುಖವಾಡ ಬಯಲಿಗೆ ಬರುತ್ತಿದೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಅರ್ನಬ್ ಗೋಸ್ವಾಮಿಯವರನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಮದು ಮತ್ತು ಮಹಾರಾಷ್ಟ್ರ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ಕೃತ್ಯಗಳನ್ನು ನಿಲ್ಲಿಸುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಸಹಕಾರ್ಯದರ್ಶಿ ಶ್ರೀರಾಮ, ರಾಜ್ಯ ಕಾರ್ಯಕಾರಿಣಿ ಸದಸ್ಯ ಚಿರಂತ್, ನಗರ ಸಹಕಾರ್ಯದರ್ಶಿ ಪ್ರಜ್ಞಾ, ರಚನಾ, ನಾಗಶ್ರೀ, ಸುಹಾಸ್ ನಂದಿಸಿ, ನಾಗಾಕಿರಣ್, ಕಿರಣ್, ಚಂದ್ರು, ಮಲ್ಲಪ್ಪ ಪಾಲ್ಗೊಂಡಿದ್ದರು.

Leave a Reply

comments

Related Articles

error: