ಮೈಸೂರು

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ರಾಜ್ ಕುಮಾರ ಚಿತ್ರ ವೀಕ್ಷಣೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಕೂಡಾ ರಿಲ್ಯಾಕ್ಸ್ ಮೂಡ್ ನಲ್ಲಿದ್ದರು. ಹಲವು ದಿನಗಳಿಂದ ನಂಜನಗೂಡು-ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದ ಅವರು ಚುನಾವಣೆಯ ದಿನ ಮೈಸೂರಿನ ಜಯಲಕ್ಷ್ಮಿಪುರಂನಲ್ಲಿರುವ ಡಿಆರ್ ಸಿ ಚಿತ್ರಮಂದಿರಕ್ಕೆ ತೆರಳಿ ಪವರ್ ಸ್ಟಾರ್ ಪುನೀತ್  ರಾಜಕುಮಾರ್  ಅಭಿನಯದ ರಾಜಕುಮಾರ್ ಚಲನಚಿತ್ರವನ್ನು ವೀಕ್ಷಿಸಿದರು.

ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕನ್ನಡದ ಮೇರುನಟ ರಾಜಕುಮಾರ್ ಅವರ ಅಭಿನಯವನ್ನು ಅವರ ಮಗ ಪುನೀತ್ ರಾಜ್ಕುಮಾರ್ ಅಭಿನಯದ ರಾಜಕುಮಾರ್ ಚಿತ್ರ ನೆನಪಿಸುತ್ತದೆ. ಚಿತ್ರ ತುಂಬಾ ಚೆನ್ನಾಗಿದೆ ಎಂದು ಹೇಳಿದ್ದರು. ಅದರಿಂದ ಚಿತ್ರ ವೀಕ್ಷಿಸಲು ಬಂದಿರುವುದಾಗಿ ತಿಳಿಸಿದರು.

ಹಲವು ದಿನಗಳ ರಾಜಕೀಯ ಒತ್ತಡ, ವಿವಿಧ ಕೆಲಸಕಾರ್ಯಗಳ ಒತ್ತಡದಿಂದ ಹೊರಬಂದ ಮುಖ್ಯಮಂತ್ರಿಗಳು ಭಾನುವಾರ 4.40 ರ ರಾಜಕುಮಾರ ಚಿತ್ರಪ್ರದರ್ಶನವನ್ನು ನೋಡಿ ನಿರಾಳರಾದರು. (ಕೆ.ಎಸ್.ಎಸ್.ಎಚ್)

Leave a Reply

comments

Related Articles

error: