ಕರ್ನಾಟಕಪ್ರಮುಖ ಸುದ್ದಿ

ಹಿರಿಯ ಯಕ್ಷಗಾನ ಕಲಾವಿದ ಎಂ.ಆರ್.ವಾಸುದೇವ ಸಾಮಗ ನಿಧನ

ಉಡುಪಿ,ನ.7-ಹಿರಿಯ ಯಕ್ಷಗಾನ ಕಲಾವಿದ ಮಲ್ಪೆ ಎಂ.ಆರ್.ವಾಸುದೇವ ಸಾಮಗ (71) ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.

ಕುಂದಾಪುರದ ಕೋಟೇಶ್ವರದಲ್ಲಿ ನೆಲೆಸಿದ್ದ ಇವರಿಗೆ ಕೋವಿಡ್ ಸೋಂಕು ತಗುಲಿತ್ತು. ಕೆಲವು ದಿನಗಳಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.

ಇವರು ಹಿರಿಯ ಯಕ್ಷಗಾನ ಕಲಾವಿದ ಮಲ್ಪೆ ರಾಮದಾಸ ಸಾಮಗ ಅವರ ಪುತ್ರ. 30ರ ಹರೆಯದಲ್ಲೇ ಯಕ್ಷಗಾನ ರಂಗ ಪ್ರವೇಶಿಸಿದ ಇವರು, ಉತ್ತರನ ಪೌರುಷದ ಉತ್ತರೆ ಮೂಲಕ ಎತ್ತರಕ್ಕೆ ಏರಿದರು. ನಾಗಶ್ರೀ ಪ್ರಸಂಗದ ಪ್ರದೀಪ ಪಾತ್ರ ಸಾಮಗರನ್ನು ಎತ್ತರಕ್ಕೆ ಏರಿಸಿದ್ದು ಇದರಿಂದಲೇ ತಮ್ಮ ಮಗನಿಗೆ ಪ್ರದೀಪ ಎಂದು ನಾಮಕರಣ ಮಾಡಿದ್ದರು.

ಸಾಲಿಗ್ರಾಮ, ಶಿರಸಿ, ಸುರತ್ಕಲ್ ಮೇಳದಲ್ಲಿ ತಿರುಗಾಟ ಮಾಡಿದ್ದು ಮಾತಲ್ಲೇ ಪ್ರೇಕ್ಷಕರ ಸೆರೆಹಿಡಿಯುವ ಸೂಜಿಗಲ್ಲಿನ ಸೆಳೆತ ಸಾಮಗರದಾಗಿತ್ತು. ಮೊಟ್ಟಮೊದಲು ತಾಳಮದ್ದಲೆ ತಂಡ ಕಟ್ಟಿ ಸಂಚಾರ ಮಾಡಿದ ಹಿರಿಮೆ ಸಾಮಗರದಾಗಿತ್ತು. ಮೃತರು ಪತ್ನಿ ಹಾಗೂ ಹವ್ಯಾಸಿ ಕಲಾವಿದ ಡಾ.ಪ್ರದೀಪ್ ಸಾಮಗ ಅವರನ್ನು ಅಗಲಿದ್ದಾರೆ. (ಎಂ.ಎನ್)

Leave a Reply

comments

Related Articles

error: