ಮೈಸೂರು

ಮಹಾವೀರ ಅಹಿಂಸಾ ಪ್ರಶಸ್ತಿ ಪ್ರದಾನ

ಭಗವಾನ್ ಶ್ರೀ ಮಹಾವೀರ ಜಯಂತಿ ಮಹೋತ್ಸವದ ಅಂಗವಾಗಿ ಶ್ರೀ ಮಹಾವೀರ ಅಹಿಂಸಾ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಮೈಸೂರಿನ  ಶ್ರೀ ವರ್ಧಮಾನಯ್ಯ ಸ್ಮಾರಕ ಭವನದಲ್ಲಿ ಶ್ರೀ ಮಹಾವೀರ ಸೇವಾ ಸಂಸ್ಥಾನದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಸಮಾರಂಭವನ್ನು  ಶಾಸಕ ಎಂ. ಕೆ. ಸೋಮಶೇಖರ್ ಉದ್ಘಾಟಿಸಿದರು. ಈ ಸಂದರ್ಭ ಸಮಾಜದ ಮುಖಂಡ ಸುರೇಶ್ ಜೈನ್  ಮಾತನಾಡಿ  ಸೋನಿಯಾ ಗಾಂಧಿಯವರು ಜೈನರನ್ನು ಅಲ್ಪಸಂಖ್ಯಾತರ ಗುಂಪಿಗೆ ಸೇರಿಸಲು ಕಾರಣೀಭೂತರು ಅವರನ್ನು ಮರೆಯಲು ಸಾಧ್ಯವಿಲ್ಲ. ದೇವರಾಜ ಅರಸುರವರು ಕರ್ನಾಟಕದಲ್ಲಿ ಜೈನರಿಗೆ ವಿಶೇಷ ಅನುಕೂಲ ಮಾಡಿದ್ದರು. ಅದೇ ಮಾದರಿಯಲ್ಲಿ  ಮುಖ್ಯಮಂತ್ರಿಗಳು ಅಭಯ್ ಚಂದ್ರ ಜೈನ್ ರನ್ನು ಸಚಿವ ಸಂಪುಟದಲ್ಲಿ ಸೇರಿಸಿಕೊಂಡು ಸಮಾಜಕ್ಕೆ ಗೌರವ ನೀಡಿದರು. ಅಷ್ಟೇ ಅಲ್ಲದೆ ಮಹಾಮಸ್ತಕಾಭಿಷೇಕಕ್ಕೆ ದೊಡ್ಡ ಮೊತ್ತದ ಹಣ ಬಿಡುಗಡೆ ಮಾಡಿದ್ದಾರೆ. ಅದೇ ಮಾದರಿಯಲ್ಲಿ ಎಂ ಕೆ ಸೋಮಶೇಖರ್  ಪದ್ಮಶ್ರೀ ಮಹಿಳಾ ಸಮಾಜಕ್ಕೆ5 ಲಕ್ಷ ಅನುದಾನವನ್ನು, ಮಹಾವೀರ ಶಿಕ್ಷಣ ಸಂಸ್ಥೆಗೆ 10ಲಕ್ಷ ಹಣವನ್ನು ಮಂಜೂರು ಮಾಡಿದ್ದಾರೆ.ಮುಂದಿನ ದಿನಗಳಲ್ಲಿ ಜೈನಭವನ ನಿರ್ಮಾಣಕ್ಕೆ ಸಹಾಯಸ್ತ ನೀಡಲಿದ್ದಾರೆ ಅವರಿಗೆ ಜೈನ ಸಮಾಜ ಎಂದೆಂದೂ ಚಿರರುಣಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದರು. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: