ಮೈಸೂರು

ನಂಜನಗೂಡಿನಲ್ಲಿ ಶೇ.77.56ರಷ್ಟು ಮತದಾನ : ಅಭ್ಯರ್ಥಿಗಳ ಭವಿಷ್ಯ ಮತ ಯಂತ್ರದಲ್ಲಿ ಭದ್ರ

ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯ ದಿಕ್ಸೂಚಿ ಎಂದೇ ವ್ಯಾಖ್ಯಾನಿಸಲಾಗುತ್ತಿರುವ ಹಾಗೂ ಆಡಳಿತಾರೂಢ ಕಾಂಗ್ರೆಸ್-ಪ್ರತಿಪಕ್ಷ ಬಿಜೆಪಿ ನಡುವಿನ ಪ್ರತಿಷ್ಠೆಯ ಕಾಳಗವಾಗಿ ಗುರುತಿಸಿಕೊಂಡಿರುವ ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರಗಳಿಗೆ ಭಾನುವಾರ ಮತದಾನ ನಡೆಯಿತು.

ನಂಜನಗೂಡಿನಲ್ಲಿ ಕಾಂಗ್ರೆಸ್ ನ ಕಳಲೆ ಕೇಶವಮೂರ್ತಿ ಹಾಗೂ ಬಿಜೆಪಿಯ ವಿ.ಶ್ರೀನಿವಾಸ್ ಪ್ರಸಾದ್ ಸೇರಿ ಒಟ್ಟು ಹನ್ನೊಂದು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಗುಂಡ್ಲುಪೇಟೆಯಲ್ಲಿ ಬಿಜೆಪಿಯ ನಿರಂಜನ್, ಕಾಂಗ್ರೆಸ್ ನ ಡಾ.ಗೀತಾ ಮಹದೇವಪ್ರಸಾದ್ ಸೇರಿ ಏಳು ಮಂದಿ ಕಣದಲ್ಲಿದ್ದಾರೆ. ಭಾನುವಾರ ಬೆಳಿಗ್ಗೆ 7 ಗಂಟೆಯಿಂದ ಸಾಯಂಕಾಲ 5ಗಂಟೆಯವರೆಗೆ ನಡೆದಿದೆ. ಎಲ್ಲೋ ಒಂದು ಕಡೆ ಇವಿಎಂ ಯಂತ್ರ ಬದಲಾಯಿಸಿದ್ದು, 100 ಮೀಟರ್ ವ್ಯಾಪ್ತಿಯೊಳಗೆ ಪಕ್ಷದ ಶಾಲು, ಕರಪತ್ರಗಳ ತಂದಿರುವುದು ಪೋಲಿಸರು ಅವರನ್ನು ಓಡಿಸಿರುವುದು, ಒಂದು ಕಡೆ ಮತದಾನ ಬಹಿಷ್ಕಾರ, ಮಧ್ಯಾಹ್ನದ ನಂತರ ನೋಟಾ ಚಲಾವಣೆ ಮಾಹಿತಿ ಬಿಟ್ಟರೆ ನಂಜನಗೂಡು ತಾಲೂಕಿನಲ್ಲಿ ಶಾಂತಿಯುತ ಮತದಾನ ನಡೆದಿದೆ.

ಮತದಾರರು ಉತ್ಸುಕತೆಯಿಂದಲೇ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ. ಸಾಯಂಕಾಲ ವೇಳೆಗೆ 236 ಮತಗಟ್ಟೆಗಳಲ್ಲಿ ಒಟ್ಟು 77.56% ಮತದಾನವಾಗಿದೆ.  ಒಟ್ಟು 201818 ಮತಗಳಿದ್ದು, 156531ಮತಗಳು ಚಲಾವಣೆಯಾಗಿವೆ. ಇದರಲ್ಲಿ 78.66% ಪುರುಷರು, 76.43% ಮಹಿಳೆಯರು ಮತಚಲಾಯಿಸಿದ್ದಾರೆ.  ಇದೀಗ ಮತಯಂತ್ರದಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದ್ದು, ಏ.13ರಂದು ಹಣೆಬರಹ ಬಯಲಾಗಲಿದೆ.

ಸ್ಥಳದಲ್ಲಿ ಸೂಕ್ತ ಬಂದೋಬಸ್ತ್ ಏರ್ಪಡಿಸಿ ಮತಯಂತ್ರಗಳ ಮೇಲೆ ನಿಗಾ ಇರಿಸಲಾಗಿದ್ದು, ಕಟ್ಟೆಚ್ಚರವಹಿಸಲಾಗಿದೆ.

Leave a Reply

comments

Related Articles

error: