ಮೈಸೂರು

ಅಪ್ರಾಪ್ತನನ್ನು ವರಿಸಿದ 24ರ ಯುವತಿ : ಠಾಣೆಯ ಮೆಟ್ಟಿಲೇರಿದ ಪ್ರಕರಣ

ಪ್ರೀತಿ ಕುರುಡು, ಪ್ರೀತಿಗೆ ಕಣ್ಣಿಲ್ಲ ಎಂದು ಹೇಳಲಾಗುತ್ತದೆ. ಆದರೆ ಇಂಥ ಪ್ರೀತಿಯೂ ಹುಟ್ಟೋದಕ್ಕೆ ಸಾಧ್ಯನಾ? ಹುಟ್ಟೋದಕ್ಕೆ ಸಾಧ್ಯ, ಜಗತ್ತಿನಲ್ಲಿ ಏನು ಬೇಕಾದರೂ ನಡೆಯಬಹುದು ಎನ್ನುವುದಕ್ಕೆ ಮೈಸೂರಿನ ಜೋಡಿಯೊಂದು ತೋರಿಸಿಕೊಟ್ಟಿದೆ.

ಭಾರತದ ಸಂವಿಧಾನದ ನಿಯಮಾನುಸಾರ ಇಲ್ಲಿನ ಹುಡುಗ ತಾನು ತನ್ನ ಕಾಲಮೇಲೆ ನಿಂತು, ಜವಾಬ್ದಾರಿಯನ್ನು ಅರಿತುಕೊಂಡಾಗ ಆತ ಕುಟುಂಬ ನಿಭಾಯಿಸಲು ಸಮರ್ಥ ಎನ್ನುವ ಕಾರಣಕ್ಕೆ ಆತ 21ರ ವಯಸ್ಸಿಗೆ ವಿವಾಹವಾಗಬಹುದು ಎಂದು ತಿಳಿಸಿತು. ಹುಡುಗಿಯ ವಯಸ್ಸನ್ನು 18ಕ್ಕೆ ನಿಗದಿಗೊಳಿಸಲಾಯಿತು. ಆದರೆ ಇಲ್ಲಿ ಆಗಿದ್ದೇ ಬೇರೆ ಪ್ರಪಂಚ ಹೇಗಿದೆ ಎನ್ನುವುದನ್ನೇ ಸರಿಯಾಗಿ ತಿಳಿಯದ 19ರ ಹರೆಯದ  ಅಪ್ರಾಪ್ತ ಯುವಕನೋರ್ವ ತನಗಿಂತ 5 ವರ್ಷ ಹಿರಿಯಳಿಗೆ ಅಂದರೆ 24ರ ಯುವತಿಗೆ ತಾಳಿ ಕಟ್ಟಿದ್ದಾನೆ.

ಇದು ನಡೆದಿದ್ದು ಮೈಸೂರಿನ ಮಂಡಿಮೊಹಲ್ಲಾದಲ್ಲಿ. ಸಾಂಸ್ಕೃತಿಕ ನಗರಿ ಎಂದು ಕರೆಸಿಕೊಂಡಿರುವ ಮೈಸೂರು ಇಂಥದ್ದೊಂದು ಅಸಹ್ಯ, ಮುಜುಗರ ಪಡುವ ಪ್ರಕರಣಕ್ಕೆ ಸಾಕ್ಷಿಯಾಯಿತು. ಮೈಸೂರಿನ ಮಂಡಿಮೊಹಲ್ಲಾದ ನಿವಾಸಿಗಳಾದ ಈ ಯುವಕ ಹಾಗೂ ಯುವತಿ ಮನೆಯವರ ಕಣ್ಣಿಗೆ ಮಣ್ಣೆರಚಿ ಸಯ್ಯಾಜಿರಾವ್ ರಸ್ತೆಯಲ್ಲಿರುವ ಸತ್ಯನಾರಾಯಣ ದೇವಸ್ಥಾನದಲ್ಲಿ ಹಾರ ಬದಲಾಯಿಸಿಕೊಂಡು ವಿವಾಹವಾಗಿದ್ದಾರೆ.

ಇದೀಗ ಅಪ್ರಾಪ್ತನ ಮನೆಯವರು ಠಾಣೆಯ ಮೆಟ್ಟಿಲೇರಿದ್ದಾರೆ. ಇದು ಬಲವಂತದ ಮದುವೆ. ಅವನಿಗೆ ವಿವಾಹವಾಗುವ ವಯಸ್ಸಲ್ಲ. ತಮ್ಮ ಮಗನನ್ನು ನಮಗೆ ವಾಪಸ್ ಕೊಡಿಸಿ ಎಂದು ಠಾಣಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈಗ ವಿಷಯ ಮಂಡಿ ಠಾಣೆಯ ಮೆಟ್ಟಿಲೇರಿದೆ. ಅದಕ್ಕೆ ತಿಳಿದವರು ಹೇಳಿರಬೇಕು ಪ್ರೀತಿ ಮಾಯೆ ಹುಷಾರು ಅಂತ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: