ಮೈಸೂರು

ಗಮನ ಸೆಳೆದ ನೃತ್ಯ, ಗಾಯನದ ಮೆರವಣಿಗೆ

ಜೈನ ಸಮುದಾಯದ ಸಂಘಗಳ ವತಿಯಿಂದ ಮಹಾವೀರ ಜಯಂತಿಯ ಅಂಗವಾಗಿ ಮೈಸೂರಿನಲ್ಲಿ ಅಲಂಕೃತವಾಹನದಲ್ಲಿ ಮಹಾವೀರರ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಮೈಸೂರಿನ ಹಳ್ಳದ ಕೇರಿಯ ವರ್ಧಮಾನ ಸ್ಮಾರಕ ಭವನದ ಬಳಿಯಿಂದ ಪಾರ್ಶ್ವನಾಥ ಪೂಜಾ ಟ್ರಸ್ಟ್, ಜೈನ್ ಮಹಿಳಾ ಸಂಘ, ಯುವಕ ಸಂಘ, ಸುಮತಿನಾಥ್ ಪೂಜಕ್ ಸಂಘ, ಮಹಾವೀರ ಸೇವಾ ಸಂಸ್ಥಾನ ಸೇರಿದಂತೆ ಸಮುದಾಯದ ವಿವಿಧ ಸಂಘಗಳ ವತಿಯಿಂದ ಆಯೋಜಿಸಲಾದ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಮೆರವಣಿಗೆಯು ಅಶೋಕ ರಸ್ತೆ, ನೆಹರೂ ವೃತ್ತ, ಹಳ್ಳದಕೇರಿ ರಸ್ತೆಗಳಲ್ಲಿ ಸಂಚರಿಸಿತು. ಮೆರವಣಿಗೆಯುದ್ದಕ್ಕೂ ಸಮುದಾಯದವರು ನೃತ್ಯ, ಗಾಯನಗಳನ್ನು ಪ್ರಸ್ತುತಪಡಿಸಿದರು.

ಮೆರವಣಿಗೆಯಲ್ಲಿ ಶಾಸಕ ವಾಸು ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು. (ಎಸ್.ಎಚ್)

Leave a Reply

comments

Related Articles

error: