
ಪ್ರಮುಖ ಸುದ್ದಿ
ಉಪಚುನಾವಣೆಯ ಮತ ಎಣಿಕೆ ಆರಂಭ : ಆರ್ ಆರ್ ನಗರದಲ್ಲಿ ಮುನ್ನಡೆ ಕಾಯ್ದುಕೊಳ್ಳುತ್ತಿರುವ ಮುನಿರತ್ನ
ರಾಜ್ಯ(ಬೆಂಗಳೂರು)ನ.10:- ನ.3 ರಂದು ಉಪಚುನಾವಣೆ ನಡೆದ ಆರ್ ಆರ್ ನಗರ, ಶಿರಾ ಕ್ಷೇತ್ರದ ಹಾಗೂ ಶಿಕ್ಷಕರ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು ಮಧ್ಯಾಹ್ನದ ವೇಳೆಗೆ ಫಲಿತಾಂಶ ಸಿಗಲಿದೆ ಎನ್ನಲಾಗಿದೆ.
ಆರ್ ಆರ್ ನಗರ ಕ್ಷೇತ್ರದ ಮತ ಎಣಿಕೆಯು ಅದೇ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಹಲಗೇವಡೇರ ಹಲ್ಲಿಯಲ್ಲಿರುವ ಜ್ಞಾನಾಕ್ಷಿ ಶಾಲೆಯಲ್ಲಿ ನಡೆಯುತ್ತಿದ್ದು, ಬಿಜೆಪಿ ಅಭ್ಯರ್ಥಿ ಮುನಿರತ್ನ ಐದನೇ ಸುತ್ತಿನಲ್ಲಿಯೂ ಮುನ್ನಡೆ ಸಾಧಿಸಿದ್ದಾರೆ. 5 ನೇ ಸುತ್ತು ಮತ ಏಣಿಕೆಯಲ್ಲಿ 6022 ಬಿಜೆಪಿ, ಕಾಂಗ್ರೆಸ್ – 2822, ಜೆಡಿಎಸ್ – 101 ರಲ್ಲಿದೆ. 5 ನೇ ಸುತ್ತಿನಲ್ಲಿ ಬಿಜೆಪಿ ಒಟ್ಟು 14,843 ಲೀಡ್ ನಲ್ಲಿದೆ. (ಕೆ.ಎಸ್,ಎಸ್.ಎಚ್)