ದೇಶಪ್ರಮುಖ ಸುದ್ದಿ

ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಕೆಲಸ, ಸೌಲಭ್ಯ ಇಲ್ಲ!

ಗುವಾಹಟಿ : ಅಸ್ಸಾಂ ರಾಜ್ಯ ಸರ್ಕಾರವು ಹೊಸ ನಿಯಮವೊಂದನ್ನು ಜಾರಿಗೊಳಿಸಿದ್ದು, ಎರಡಕ್ಕಿಂತ ಹೆಚ್ಚು ಮಕ್ಕಳು ಹೊಂದಿರುವ ಅಭ್ಯರ್ಥಿಗಳಿಗೆ ಸರ್ಕಾರಿ ಸೇವೆ ಅವಕಾಶವಿಲ್ಲ ಎಂದು ಹೇಳಿದೆ.

ಭಾನುವಾರ ಈ ಬಗ್ಗೆ ಮಾತನಾಡಿದ ಅಸ್ಸಾಂ ಸರ್ಕಾರದ ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ಅವರು, ಜನಸಂಖ್ಯಾ ನಿಯಂತ್ರಣ ಹಾಗೂ ಬಡತನ ರೇಖೆಗಿಂತ ಕೆಳಗಿರುವವರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಅಸ್ಸಾಂ ಸರ್ಕಾರ ಇಂತಹದೊಂದು ಕಠಿಣ ನಿರ್ಧಾರ ಕೈಗೊಂಡಿದ್ದು, ಎರಡಕ್ಕಿಂತ ಹೆಚ್ಚು ಮಕ್ಕಳಿರುವ ಅಭ್ಯರ್ಥಿಗಳು ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಲು ಅನರ್ಹರು ಎಂದು ಘೋಷಣೆ ಮಾಡಿದ್ದಾರೆ.

ಹೊಸ ಜನಸಂಖ್ಯಾ ನೀತಿಯ ಅಡಿಯಲ್ಲಿ ಉದ್ಯೋಗಳು ಎಂಬ ಕರಡು ಪ್ರತಿಯನ್ನು ಅಸ್ಸಾಂ ಸರ್ಕಾರ ಅಂಗೀಕರಿಸಿದ್ದು, ಬಡತನ ರೇಖೆಗಿಂತ ಕೆಳಗಿರುವವರನ್ನು ಅಭಿವೃದ್ಧಿಗೊಳಿಸುವುದು ಮತ್ತು ಸಶಕ್ತರನ್ನಾಗಿಸುವುದು ಸರ್ಕಾರದ ಉದ್ದೇಶ. ಷರತ್ತಿನ ಅನ್ವಯ ಉದ್ಯೋಗ ಪಡೆದುಕೊಂಡವರು ತಮ್ಮ ಸೇವಾವಧಿ ಪೂರ್ಣಗೊಳ್ಳುವವರೆಗೂ ಇದನ್ನು ಪಾಲಿಸಬೇಕು.

ಸರ್ಕಾರಿ ನೌಕರಿ ನೀಡಿಕೆ ಮಾತ್ರವಲ್ಲ, ಟ್ರ್ಯಾಕ್ಟರ್‌ ನೀಡಿಕೆ, ಗೃಹ ಹಂಚಿಕೆ ಮುಂತಾದ ಸರ್ಕಾರಿ ಯೋಜನೆಗಳಿಗೂ ಯೋಜನೆ ಅನ್ವಯವಾಗಲಿದೆ. ಪಂಚಾಯತ್‌, ಮುನಿಸಿಪಾಲಿಟಿ ಚುನಾವಣೆ ಸೇರಿದಂತೆ ರಾಜ್ಯ ಚುನಾವಣಾ ಆಯೋಗದ ಅಡಿಯಲ್ಲಿ ನಡೆಯುವ ಚುನಾವಣಾ ಅಭ್ಯರ್ಥಿಗಳೂ ಈ ನೀತಿಯನ್ನು ಪಾಲಿಸಬೇಕು ಎಂದು ಕರಡಿನಲ್ಲಿ ಹೇಳಲಾಗಿದೆ.

ಎರಡು ಮಕ್ಕಳು ಸಾಕು ಎಂಬ ನೀತಿ ಇದೆಯಾದರೂ ಈ ನಿಯಮವನ್ನು ಕೆಲವೇ ಮಂದಿ ಪಾಲಿಸುತ್ತಿದ್ದಾರೆ. ಮದುವೆ ವಯೋಮಿತಿ ಗಂಡಿಗೆ 21 ಹೆಣ್ಣಿಗೆ 18 ವರ್ಷಗಳಾಗಿದ್ದು, ಅದಕ್ಕಿಂತ ಕಡಿಮೆ ವಯಸ್ಸಿನಲ್ಲಿ ಮದುವೆ  ಮಾಡಿದರೆ ಶಿಕ್ಷೆಯಾಗುತ್ತದೆ. ಹೀಗಾಗಿ ಈ ಕರಡು ನೀತಿಯನ್ನು ಜಾರಿಗೆ ತರಲಾಗುತ್ತಿದೆ ಎಂದು ಸಚಿವರು ವಿವರಣೆ ನೀಡಿದ್ದಾರೆ.

(ಎನ್‍.ಬಿ.ಎನ್)

Leave a Reply

comments

Related Articles

error: