ಪ್ರಮುಖ ಸುದ್ದಿ

ಅತ್ಯಂತ ಕಿರಿಯ ಪ್ರೋಗ್ರಾಮರ್ ಹೆಸರಲ್ಲಿ ಗಿನ್ನೆಸ್ ದಾಖಲೆಯ ಪುಟ ಸೇರಿದ ಅಹಮದಾಬಾದ್ನ 2 ನೇ ತರಗತಿ ಪೋರ

ದೇಶ(ನವದೆಹಲಿ)ನ.10:- ನಮ್ಮ ದೇಶದಲ್ಲಿ ಪ್ರತಿಭೆಗಳಿಗೇನೂ ಕೊರತೆಯಿಲ್ಲ. ದೈಹಿಕ ಸಾಮರ್ಥ್ಯದ ಕ್ಷೇತ್ರದಲ್ಲಿ ಮಾನಸಿಕ ಸಾಮರ್ಥ್ಯ ಕ್ಷೇತ್ರದಲ್ಲಿ ಅನನ್ಯ ಪ್ರತಿಭೆಗಳು ಹೊರಬಂದಿದ್ದಾರೆ. ಅವರ ಹೆಸರುಗಳು ಗಿನ್ನಿಸ್ ಬುಕ್ ನಲ್ಲಿ ದಾಖಲೆಯಾಗಿವೆ ನೋಂದಾಯಿಸಿವೆ. ಈಗ ದೇಶದಲ್ಲಿ 6 ವರ್ಷದ 2ನೇ ತರಗತಿಯ ವಿದ್ಯಾರ್ಥಿಯೋರ್ವ ತನ್ನ ಕಾರ್ಯದಿಂದಾಗಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.
ವಾಸ್ತವವಾಗಿ, ಗುಜರಾತ್ನ ಅಹಮದಾಬಾದ್ ನಲ್ಲಿ 2 ನೇ ತರಗತಿಯ ವಿದ್ಯಾರ್ಥಿ ಕಂಪ್ಯೂಟರ್ ಜಗತ್ತಿನಲ್ಲಿ ಒಂದು ಸಾಧನೆ ಮಾಡಿದ್ದಾರೆ. ಅರ್ಹಮ್ ಓಂ ತಲ್ಸಾನಿಯಾ ಕೇವಲ ಅತ್ಯಂತ ಕಿರಿಯ ವಯಸ್ಸಿನಲ್ಲಿ ವಿಶ್ವದ ಅತ್ಯಂತ ಕಿರಿಯ ಕಂಪ್ಯೂಟರ್ ಪ್ರೋಗ್ರಾಮರ್ ಆಗಿದ್ದಾರೆ. ವಿಶ್ವದ ಅತ್ಯಂತ ಕಿರಿಯ ಕಂಪ್ಯೂಟರ್ ಪ್ರೋಗ್ರಾಮರ್ ಆಗಿ ಅರ್ಹಮ್ ಓಂ ತಲ್ಸಾನಿಯಾ ತನ್ನ ಹೆಸರನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ನೋಂದಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅರ್ಹಮ್ ಓಮ್ ತಲ್ಸಾನಿಯಾ ಅವರ ತಂದೆಯ ಪ್ರಕಾರ ಆತ ಕೋಡಿಂಗ್ನಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ. ಮತ್ತು ಪ್ರೋಗ್ರಾಮಿಂಗ್ನ ಮೂಲಭೂತ ಅಂಶಗಳನ್ನು ಕಲಿತಿದ್ದ. ಈ ಕಾರಣದಿಂದಾಗಿಯೇ ಮೈಕ್ರೋಸಾಫ್ಟ್ ಆಯೋಜಿಸಿದ್ದ ಪೈಥಾನ್ ಪ್ರೋಗ್ರಾಮಿಂಗ್ ಭಾಷೆಯಲ್ಲಿ ಉತ್ತೀರ್ಣನಾಗಿದ್ದಾನೆ ಎಂದಿದ್ದಾರೆ.
ಮೈಕ್ರೋಸಾಫ್ಟ್ ಪಿಯರ್ ಸನ್ ವ್ಯೂ ಟೆಸ್ಟ್ ಕೇಂದ್ರದಲ್ಲಿ ಈ ಪರೀಕ್ಷೆಯನ್ನು ನಡೆಸಲಾಗಿತ್ತು. ಪಾಕಿಸ್ತಾನ ಮೂಲದ ಏಳು ವರ್ಷದ ಬ್ರಿಟಿಷ್ ಹುಡುಗ ಮುಹಮ್ಮದ್ ಹಮ್ಜಾ ಶೆಹಜಾದ್ ಅವರ ಗಿನ್ನೆಸ್ ರೆಕಾರ್ಡ್ ನ್ನು ಅರ್ಹಮ್ ಮುರಿದಿದ್ದು, ದಾಖಲೆ ನಿರ್ಮಿಸಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: