ದೇಶಪ್ರಮುಖ ಸುದ್ದಿ

ಮತಕ್ಕಾಗಿ ನೋಟು : ಜಯಲಲಿತಾ ನಿಧನದಿಂದ ತೆರವಾಗಿದ್ದ ಆರ್.ಕೆ.ನಗರ ಉಪ ಚುನಾವಣೆ ರದ್ದು

ಚೆನ್ನೈ: ಏಪ್ರಿಲ್ 12 ರಂದು ನಡೆಯಬೇಕಿದ್ದ ತಮಿಳುನಾಡು ವಿಧಾನಸಭಾ ಕ್ಷೇತ್ರ ಆರ್‍.ಕೆ.ನಗರ ಉಪಚುನಾವಣೆಯನ್ನು ಚುನಾವಣಾ ಆಯೋಗ ಭಾನುವಾರ ರದ್ದುಗೊಳಿಸಿದೆ. ಚುನಾವಣೆ ಪ್ರಚಾರದ ವೇಳೆ ಹಣದ ಹೊಳೆಯೇ ಹರಿಯುವಂತ ವಾತಾವರಣ ನಿರ್ಮಾಣವಾಗಿದ್ದ ಕಾರಣ ಕಾರಣ ಉಪಚುನಾವಣೆಯನ್ನೇ ಚುನಾ​ವಣಾ ಆಯೋಗ ಭಾನುವಾರ ರದ್ದುಪಡಿಸಿ ಆದೇಶ ಹೊರಡಿಸಿದೆ.

ಮಾಜಿ ಸಿ.ಎಂ. ಜಯಲಲಿತಾ ಅವರ ನಿಧನದಿಂದಾಗಿ ತೆರವಾಗಿದ್ದ ಈ ಕ್ಷೇತ್ರದಲ್ಲಿ ಉಪಚುನಾವಣೆ ನಿಗದಿಯಾಗಿತ್ತು. ಆದರೆ ಮತವೊಂದಕ್ಕೆ 4 ಸಾವಿರ ರೂ. ನಂತೆ ಸುಮಾರು 2.24 ಲಕ್ಷ ಮತದಾರರಿಗೆ ಹಣ ಹಂಚಿಕೆ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದ ನಂತರ ಚುನಾವಣಾ ಆಯೋಗವು ಕಠಿಣ ನಿರ್ಧಾರ ತೆಗೆದುಕೊಂಡಿದ್ದು, ಉಪಚುನಾವಣೆಯನ್ನು ರದ್ದುಪಡಿಸಿದೆ.

ಮೂಲಗಳ ಪ್ರಕಾರ ಪ್ರತಿ ಮತದಾರರಿಗೂ ಅಣ್ಣಾಡಿ​ಎಂಕೆಯ ಆಡಳಿತಾರೂಢ ಶಶಿಕಲಾ ಬಣ 4 ಸಾವಿರ ರೂಪಾಯಿ ಹಂಚಿದೆ ಎಂಬ ಮಾಹಿತಿ ಆದಾಯ ತೆರಿಗೆ ದಾಳಿ ವೇಳೆ ಖಚಿತಪಟ್ಟಿತ್ತು. ತಮಿಳುನಾಡು ಚುನಾವಣಾ ಆಧಿಕಾರಿಗಳ ಜತೆ ಹಲವು ಸುತ್ತಿನ ಸಭೆಯ ಬಳಿಕ ಆಯೋಗವು ಏಪ್ರಿಲ್ 12ರಂದು ನಿಗದಿಯಾಗಿರುವ ಚುನಾ​ವಣೆಯನ್ನು ರದ್ದುಗೊಳಿಸುವ ನಿರ್ಧಾರ ಕೈಗೊಂ​ಡಿದೆ. ವಾತಾವರಣ ತಿಳಿಯಾಗಿ ಪಾರದರ್ಶಕ ವಾತಾವರಣ ನಿರ್ಮಾಣವಾದ ಬಳಿಕ ಮತ್ತೊಮ್ಮೆ ಚುನಾವಣೆ ನಡೆಸಲಾಗುವುದು ಎಂದು ಆಯೋಗ ತಿಳಿಸಿದೆ.

ಈ ಹಿಂದೆ ಹಣ ಬಲದಿಂದ ಚುನಾವಣೆ ಎದುರಿಸಿದ ಕಾರಣಕ್ಕಾಗಿ ಅವರ್ಕುರುಚಿ ಮತ್ತು ತಂಜಾವೂರು ವಿಧಾನಸಭಾ ಕ್ಷೇತ್ರಗಳ ಚುನಾವಣಾ ಆಯೋಗ ರದ್ದುಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

(ಎನ್‍.ಬಿ.ಎನ್)

Leave a Reply

comments

Related Articles

error: