
ಪ್ರಮುಖ ಸುದ್ದಿ
ಜ್ಯೋತಿಷಿಗಳ ಮಾತು ಕೇಳಿ ಕಾಂಗ್ರೆಸ್ ಗೆ ಹೀನಾಯ ಸೋಲು : ಸಚಿವ ಡಾ.ಸುಧಾಕರ್ ವ್ಯಂಗ್ಯ
ರಾಜ್ಯ( ಬೆಂಗಳೂರು)ನ.11:- ಉಪಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಪಕ್ಷದ ಅಭ್ಯರ್ಥಿ ಡಾ. ರಾಜೇಶ್ ಗೌಡ ಹಾಗೂ ಮುನಿರತ್ನ ಅವರಿಗೆ ಮತ್ತು ಅಭೂತಪೂರ್ವ ವಿಜಯ ಸಾಧಿಸಲು ಶ್ರಮಿಸಿದ ಪಕ್ಷದ ಎಲ್ಲಾ ನಾಯಕರಿಗೂ ಮತ್ತು ಕಾರ್ಯಕರ್ತರಿಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು ಜ್ಯೋತಿಷಿಗಳ ಮಾತು ಕೇಳಿ ಅಭ್ಯರ್ಥಿ ಹಾಕದೆ ಜನರ ನಾಡಿಮಿಡಿತ ಅರಿತು ಅಭ್ಯರ್ಥಿ ಹಾಕಿದ್ದರೆ ಬಹುಶಃ ಕಾಂಗ್ರೆಸ್ ಪಕ್ಷಕ್ಕೆ ಇಷ್ಟು ಹೀನಾಯ ಸೋಲು ಅನುಭವಿಸುವ ಪರಿಸ್ಥಿತಿ ಬರುತ್ತಿರಲಿಲ್ಲವೇನೋ. ಮುನಿರತ್ನ ಅವರ ಜನಪರ ಕಾರ್ಯಗಳು ಆರ್ ಆರ್ ನಗರದ ಜನತೆಯ ಮನ ಗೆದ್ದಿದ್ದು ಹ್ಯಾಟ್ರಿಕ್ ಗೆಲುವು ಸಾಧಿಸಿ ಮತ್ತೊಮ್ಮೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ ಎಂದಿದ್ದಾರೆ.