ಕರ್ನಾಟಕಪ್ರಮುಖ ಸುದ್ದಿ

100ನೇ ವಸಂತಕ್ಕೆ ಕಾಲಿಟ್ಟ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ

ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಎಚ್‍.ಎಸ್‍. ದೊರೆಸ್ವಾಮಿ ಅವರು 99 ವರ್ಷಗಳನ್ನು ಪೂರೈಸಿ 100 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಭ್ರಷ್ಟಾಚಾರ, ಮತ್ತು ನಾಡಿನ ಜನತೆಯ ಹಿತಾಸಕ್ತಿಗೆ ವಿರುದ್ಧವಾಗಿ ನಡೆಯುವ ಅವ್ಯವಹಾರಗಳ ವಿರುದ್ಧ ಹೋರಾಟ ಮಾಡುವುದರಲ್ಲಿ ಸಕ್ರಿಯವಾಗಿರುವ ಹೆಚ್.ಎಸ್. ದೊರೆಸ್ವಾಮಿ ಅವರು ಜನಿಸಿದ್ದು ಬೆಂಗಳೂರು ಸಮೀಪದ ಹಾರೋಹಳ್ಳಿಯಲ್ಲಿ 1918 ರ ಏಪ್ರಿಲ್ 10 ರಂದು. ದೊರೆಸ್ವಾಮಿ ಅವರಿಗೆ ನಾಡಿನ ಹಲವು ಗಣ್ಯರು ಜನ್ಮದಿನದ ಶುಭಾಶಯ ಕೋರಿದ್ದು, ಬೆಂಗಳೂರು ಮೇಯರ್ ಜಿ. ಪದ್ಮಾವತಿ, ಉಪಮೇಯರ್ ಆನಂದ್ ಅವರು ದೊರೆಸ್ವಾಮಿ ಅವರನ್ನು ಭೇಟಿ ಮಾಡಿ ಜನ್ಮದಿನದ ಶುಭಾಶಯ ಕೋರಿದರು.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾತ್ಮಾ ಗಾಂಧಿ ಅವರ ಕರೆಗೆ ಓಗೊಟ್ಟ ಹೆಚ್.ಎಸ್. ದೊರೆಸ್ವಾಮಿ ಅವರು, ಬಾಲ್ಯದಲ್ಲೇ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದರು. ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕೆ ಅವರನ್ನು 14 ತಿಂಗಳು ಬಂಧಿಸಲಾಗಿತ್ತು. ಬ್ರಿಟೀಷ್ ಸರ್ಕಾರದ ವಿರುದ್ಧ ನಾಡ ಬಾಂಬ್ ಎಸೆಯುವ ಮೂಲಕ ಬ್ರಿಟೀಷ್ ಸರ್ಕಾರದ ಕಡತಗಳನ್ನು ನಾಶ ಮಾಡುತ್ತಿದ್ದರು. ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ಸಂದರ್ಭವೂ ದೊರೆಸ್ವಾಮಿ ಅವರನ್ನು 4 ತಿಂಗಳ ಕಾಲ ಬಂಧಿಸಿಡಲಾಗಿತ್ತು.

(ಎನ್‍.ಬಿ.ಎನ್‍)

Leave a Reply

comments

Related Articles

error: