ಮೈಸೂರು

ರಿಲ್ಯಾಕ್ಸ್ ಆಗಿದ್ದಾರೆ ಡಾ.ಗೀತಾಮಹದೇವ್ ಪ್ರಸಾದ್!

ಕಳೆದ 15ದಿನಗಳಿಂದ ಚುನಾವಣಾ ಕೆಲಸದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ  ಡಾ.ಗೀತಾಮಹದೇವಪ್ರಸಾದ್ ಸೋಮವಾರ ರಿಲ್ಯಾಕ್ಸ್ ಆಗಿದ್ದಾರೆ.

ಗುಂಡ್ಲುಪೇಟೆಯ ಚುನಾವಣಾ ದಿನಾಂಕ ನಿಗದಿಯಾಗುತ್ತಿದ್ದಂತೆ, ನಾಮಪತ್ರ ಸಲ್ಲಿಕೆ, ಪ್ರಚಾರ ಎಂದು ಸದಾ ಬ್ಯುಸಿಯಾಗಿ, ಬಿಡುವಿಲ್ಲದೇ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಗುಂಡ್ಲುಪೇಟೆ ಕಾಂಗ್ರೆಸ್ ಅಭ್ಯರ್ಥಿ ಸೋಮವಾರ ತಮ್ಮ ಮೊಮ್ಮಗನೊಂದಿಗೆ ಸಂತಸದ ಕ್ಷಣಗಳನ್ನು ಕಳೆದರು.

ಹಲವು ದಿನಗಳು ಪ್ರತಿ ಗಾಮಗಳ ಮನೆಮನೆಗೂ ಬಿಸಿಲನ್ನೂ ಲೆಕ್ಕಿಸದೇ ಮತಯಾಚನೆಗೆ ತೆರಳಿದ್ದ ಅವರು ಯಾವುದೋ ಒಂದು ಒತ್ತಡದಿಂದ ಹೊರಬಂದವರಂತೆ ಪ್ರಶಾಂತವಾಗಿ ಕಂಡು ಬಂದರು. ತಮ್ಮ ಮಗ ಸೊಸೆಯರೊಂದಿಗೆ ಹಲವು ಸಮಯಗಳನ್ನು ಉಲ್ಲಾಸದಿಂದ ಕಳೆದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: