ಮೈಸೂರು

ಅಪರಿಚಿತ ವ್ಯಕ್ತಿಯ ಶವ ಪತ್ತೆ

ಮೈಸೂರು.ನ.11:- ನವೆಂಬರ್ 7 ರಂದು ಮಂಡ್ಯ ರೈಲು ನಿಲ್ದಾಣದ ವೇದಿ ನಂ.3 ರ ರೋಡ್ ನಂ.3 ರಲ್ಲಿ ಸುಮಾರು 35 ವರ್ಷದ ಅಪರಿಚಿತನೋರ್ವ ರೈಲಿಗೆ ಸಿಲುಕಿ ಮೃತಪಟ್ಟಿದ್ದು, ಸ್ಥಳದಲ್ಲಿ ಮೃತ ವ್ಯಕ್ತಿಯ ವಾರಸುದಾರರು ಯಾರೂ ಇರುವುದಿಲ್ಲ. ಸದ್ಯ ಮೃತದೇಹವನ್ನು ಮಂಡ್ಯ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ಮೃತ ವ್ಯಕ್ತಿಯ ಚಹರೆ ಇಂತಿವೆ
ಸುಮಾರು 35 ವರ್ಷ, 5.6 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೋಲು ಮುಖ, ಕಪ್ಪು ಗಡ್ಡ, ಮೀಸೆ ಬಿಟ್ಟಿರುತ್ತಾರೆ. ಬಲಗೈ ಮೊಣಕೈ ಮೇಲೆ ಆಂಜನೇಯ ದೇವರ ಚಿತ್ರದ ಹಚ್ಚೆ, ಬಲ ತೋಳಿನಲ್ಲಿ ಗೂಳಿ ಚಿತ್ರವಿರುವ ಹಚ್ಚೆ, ಎಡಗೈ ಮೊಣಕೈ ಮೇಲೆ ಲವ್ ಸಿಂಬಲ್ ಹಚ್ಚೆ ಇರುತ್ತದೆ. ಎಡಗೈ ತೋಳಿನಲ್ಲಿ ಹುಲಿ ಮೇಲೆ ಕುಳಿತಿರುವ ಮಹದೇಶ್ವರ ದೇವರ ಹಚ್ಚೆ, ಬಲ ಎದೆಯ ಮೇಲೆ ವಿನುತ ಶ್ರೀನಿವಾಸ, ಎಡ ಎದೆಯ ಮೇಲೆ ರೇಷ್ಮ, ನಿರ್ಮಲ ಮಂಜೇಗೌಡ , ಬಲಗೈ ಅಂಗೈಯ ಮೇಲೆ ರಕ್ಷಾ ಅಮೂಲ್ಯ ಎಂದು ಹಚ್ಚೆ ಇರುತ್ತದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: