ಮೈಸೂರು

ಕ್ಷುಲ್ಲಕ ಕಾರಣಕ್ಕೆ ಮಹಿಳೆಯ ಹತ್ಯೆ : ವ್ಯಕ್ತಿ ಬಂಧನ

ಮೈಸೂರು,ನ.11:- ಕ್ಲುಲಕ ಕಾರಣಕ್ಕೆ ಮಹಿಳೆಯನ್ನು ಹತ್ಯೆ ಮಾಡಿದ್ದ ಆರೋಪಿಯನ್ನು ಲಷ್ಕರ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಶ್ರೀರಂಗಪಟ್ಟಣ ತಾಲ್ಲೂಕಿನ ಹನುಮಂತನಗರದ ನಿವಾಸಿ ಆಲ್ವೀನ್ (36) ಎಂದು ಗುರುತಿಸಲಾಗಿದೆ.

ಈತ ಅ.17ರಂದು ತಾನು ವಾಸವಿದ್ದ ವೀರನಗೆರೆಯ ಮನೆಯಲ್ಲಿ ತನ್ನ ಹೆಂಡತಿಯೊಂದಿಗೆ ಜಗಳವಾಡುತ್ತಿದ್ದಾಗ ಬಿಡಿಸಲು ಬಂದ ಎದುರು ಮನೆಯ ಮಹದೇವಮ್ಮ ಎಂಬವರಿಗೆ ಕಾಲಿನಿಂದ ಒದ್ದು, ತಲೆಯನ್ನು ಗೋಡೆಗೆ ಗುದ್ದಿಸಿ, ಚಾಕುವಿನಿಂದ ಹೊಟ್ಟೆಗೆ ಚುಚ್ಚಿ ಕೊಲೆಗೈದು ತಲೆ ಮರೆಸಿಕೊಳ್ಳುವ ಉದ್ದೇಶದಿಂದ ವೀರನಗೆರೆಯ ಮನೆಯನ್ನು ಖಾಲಿ ಮಾಡಿ ಶ್ರೀರಂಗಪಟ್ಟಣದಲ್ಲಿ ಮನೆ ಮಾಡಿಕೊಂಡು ತಲೆ ಮರೆಸಿಕೊಂಡಿದ್ದ. ಈ ಸಂಬಂಧ ತನಿಖೆ ಆರಂಭಿಸಿದ್ದ ಪೊಲೀಸರು ಆರೋಪಿಯನ್ನು ಶ್ರೀರಂಗಪಟ್ಟಣದ ಬಸ್ ಸ್ಟ್ಯಾಂಡ್ ಬಳಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ನೀಡಿದ್ದರು.

ಆರೋಪಿ ಅಲ್ವಿನ್‌ ವಿನಾಕಾರಣ ಸಾರ್ವಜನಿಕರೊಂದಿಗೆ ಗಲಾಟೆ ಮಾಡಿ ಕೊಲೆ ಮತ್ತು ಮಾರಣಾಂತಿಕ ಹಲ್ಲೆ ಮಾಡುವ ಪ್ರವೃತಿ ಉಳ್ಳವನಾಗಿದ್ದು, ಈ ಹಿಂದೆ ಮೈಸೂರು ನಗರದ ನರಸಿಂಹರಾಜ ಪೊಲೀಸ್ ಠಾಣೆ ಹಾಗೂ ಆಲನಹಳ್ಳಿ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ಕೊಲೆ ಬೆದರಿಕೆ ಪ್ರಕರಣಗಳು ದಾಖಲಾಗಿ, ಜೀವಾವಧಿ ಶಿಕ್ಷೆ ಅನುಭಸಿ ಸೆಪ್ಟೆಂಬರ್ ತಿಂಗಳಲ್ಲಿ ಕಾರಾಗೃಹದಿಂದ ಬಿಡುಗಡೆ ಆಗಿರುತ್ತಾನೆ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.

ಡಿಸಿಪಿ ಡಾ. ಎ.ಎನ್ ಪ್ರಕಾಶ್ ಗೌಡ ಮಾರ್ಗದರ್ಶನದಲ್ಲಿ ದೇವರಾಜ ವಿಭಾಗದ ಎ.ಸಿ.ಪಿ. ಶಶಿಧರ್ ಅವರ ಉಸ್ತುವಾರಿಯಲ್ಲಿ ಲಷ್ಕರ್ ಪೊಲೀಸ್ ಠಾಣೆಯ ಪಿ.ಐ. ಸುರೇಶ್ ಕುಮಾರ್, ಪಿ.ಎಸ್.ಐ ಗೌತಮ್ ಗೌಡ, ಧನಲಕ್ಷ್ಮಿ , ಸಿಬ್ಬಂದಿಗಳಾದ ಲಿಂಗರಾಜು, ಆದಂ, ಬೋಪಯ್ಯ, ಮಂಜುನಾಥ್, ಪ್ರತೀಪ, ಮಂಜುನಾಥ್, ಚಿನ್ನಪ್ಪ, ಕಿರಣ, ಸತ್ಯ ಕಾರ್ಯಾಚಾರಣೆಯಲ್ಲಿ ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: