ಮೈಸೂರು

ರೆಡ್ ಕ್ರಾಸ್ ಸಾಮಾಜಿಕ ಕಳಕಳಿಯನ್ನು ಬೆಳೆಸುತ್ತಿದೆ : ಪ್ರೊ.ಎಂ.ಮಹದೇವಪ್ಪ

ರೆಡ್‍ಕ್ರಾಸ್ ಸಂಸ್ಥೆ ಯುವಕರಲ್ಲಿ ದೇಶಾಭಿಮಾನ, ಸೇವಾ ಮನೋಭಾವ, ಸಾಮಾಜಿಕ ಕಳಕಳಿಯನ್ನು ಬೆಳೆಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ ಎಂದು ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಮೈಸೂರು ಉಪಸಭಾಪತಿ ಪ್ರೊ.ಎಂ.ಮಹದೇವಪ್ಪ ತಿಳಿಸಿದರು.

ಸೋಮವಾರ ಮೈಸೂರಿನ  ಡಿ.ಬನುಮಯ್ಯ ವಾಣಿಜ್ಯ ಮತ್ತು ಕಲಾ ಕಾಲೇಜಿನಲ್ಲಿ ಆಯೋಜಿಸಿದ್ದ ಯುವ ರೆಡ್‍ಕ್ರಾಸ್ ಘಟಕದ ಉದ್ಘಾಟನೆ ಹಾಗೂ ಅಂಗೈಯಲ್ಲಿ ಸಂಜೀವಿನಿ ಆರೋಗ್ಯ ಭಾಗ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಪಘಾತದ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ, ವಿಪತ್ತಿನ ನಿರ್ವಹಣೆ, ಆಪತ್ಕಾಲದಲ್ಲಿ ಸಹಾಯ ಹಸ್ತ ಚಾಚುವುದು, ಸಾರ್ವಜನಿಕರಲ್ಲಿ ನೇತ್ರದಾನ, ರಕ್ತದಾನದ ಬಗ್ಗೆ ಅರಿವು ಮೂಡಿಸುವುದು, ನುರಿತ ತಜ್ಞ ವೈದ್ಯರ ಸಹಾಯದಿಂದ ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡುವುದರ ಬಗ್ಗೆ ವಿದ್ಯಾರ್ಥಿಗಳಿಗೆ ರೆಡ್‍ಕ್ರಾಸ್ ಸಂಸ್ಥೆ ತರಬೇತಿ ನೀಡಲಿದ್ದು ಸೇವೆಯೇ ಇದರ ಮೂಲ ಉದ್ದೇಶ ಎಂದರು.  ದೇಶ ಹಾಗೂ ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ರೆಡ್‍ಕ್ರಾಸ್ ಘಟಕವನ್ನು ಆರಂಭಿಸುತ್ತಿದ್ದು ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿದಾಗ ಮಾತ್ರ ರೆಡ್‍ಕ್ರಾಸ್ ಘಟಕದ ಮೂಲ ಆಶಯ ಯಶಸ್ವಿಯಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ವಿ.ಬಿ.ಜಯದೇವ, ಯೋಗ ಗುರು ಪಂಡಿತ್ ಬಿ.ಧನ್ಯಕುಮಾರ್, ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಿ.ಎಸ್.ವನಜ, ನ್ಯಾಕ್ ಸಂಯೋಜಕ ಡಾ.ಎಚ್.ಆರ್.ಆನಂದ್, ಸಹಾಯಕ ಪ್ರಾಧ್ಯಾಪಕ ಪ್ರೊ.ಬಸವರಾಜು ಸೇರಿದಂತೆ ಹಲವರು  ಉಪಸ್ಥಿತರಿದ್ದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: