ಮೈಸೂರು

ಮಾಸ್ಕ್ ಧರಿಸದೇ ಓಡಾಡುತ್ತಿದ್ದ ಜನರಿಗೆ ದಂಡ ವಿಧಿಸಿ ಜಾಗೃತಿ ಮೂಡಿಸಿದ ಪೊಲೀಸರು

ಮೈಸೂರು,ನ.11:- ಸಾರ್ವಜನಿಕ ಪ್ರದೇಶದಲ್ಲಿ ಮಾಸ್ಕ್ ಧರಿಸದೇ ಓಡಾಡುತ್ತಿದ್ದ ಜನರಿಗೆ ಕೆ.ಆರ್.ಠಾಣಾ ಪೋಲಿಸರು ದಂಡ ವಿಧಿಸಿ ಜಾಗೃತಿ ಮೂಡಿಸಿದ್ದಾರೆ.
ಮೈಸೂರಿನ ಗನ್ ಹೌಸ್ ಬಳಿ ‌‌ಕೃಷ್ಣರಾಜ ಪೊಲೀಸ್ ಠಾಣಾ ಪೋಲಿಸ್ ಇನ್ಸ್ಪೆಕ್ಟರ್ ಶ್ರೀನಿವಾಸ್ ಹಾಗೂ ಸಿಬ್ಬಂದಿಗಳು ಸಾರ್ವಜನಿಕರು ಮಾಸ್ಕ್ ಹಾಕುವಂತೆ ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸಿ 21 ಅಂಶವಿರುವ ಜಾಗೃತಿ ಕರಪತ್ರ ಹಂಚಿದರು.
ಇದೇ ಸಂದರ್ಭ ಇನ್ಸ್ಪೆಕ್ಟರ್ ಶ್ರೀನಿವಾಸ್ ಮಾತನಾಡಿ ಪೋಲಿಸ್ ಇಲಾಖೆ ವತಿಯಿಂದ ಕೋವಿಡ್-19 ತಡೆಗಟ್ಟುವ ಬಗ್ಗೆ ಮುಂಜಾಗ್ರತಾ ವಹಿಸುವಂತೆ ಇಲಾಖೆ ಆದೇಶ ಹೊರಡಿಸಿದೆ.ಆದೇಶ ಮೇರೆಗೆ ಕೆ.ಆರ್. ಪೊಲೀಸ್ ಠಾಣೆಯಿಂದ ಸಾರ್ವಜನಿಕರಿಗೆ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸುತ್ತಿದ್ದೇವೆ. ಇಲಾಖೆ ವತಿಯಿಂದ 3 ಕಮೆಂಡೋ ವಾಹನ ನೀಡಿದ್ದಾರೆ. ಚಳಿಗಾಲ ಆರಂಭವಾಗುತ್ತಿದ್ದು ಕೊರೋನಾ ಉಲ್ಬಣವಾಗುವ ಸಾಧ್ಯತೆ ಇದೆ.ಆದ್ದರಿಂದ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ,ಸಾಮಾಜಿಕ ಅಂತರ ಕಾಪಾಡಿ ಎಂದು ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದ್ದೇವೆ. ಸಾರ್ವಜನಿಕರು ಸಹಕರಿಸಬೇಕು ಎಂದರು. ಧ್ವನಿವರ್ಧಕ ಜಾಗೃತಿ ಕಮಾಂಡೋ ವಾಹನ ಕೆ.ಆರ್.ಠಾಣಾ ವ್ಯಾಪ್ತಿಯಲ್ಲಿ ಸಂಚರಿಸಲಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: