ಮೈಸೂರು

ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿಕುಮಾರ್ ಗೆ ಕನ್ನಡ ಹೆಮ್ಮೆಯ ಸೈನಿಕ ಪ್ರಶಸ್ತಿ

ಮೈಸೂರು,ನ.11:- ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷರಾದ ತೇಜಸ್ವಿ ಕುಮಾರ್ ಪಾಟೀಲ್ ಎಂ ಆರ್ ಅವರ ಕನ್ನಡ ಪರ ಹೋರಾಟಗಳನ್ನು ಗಮನಿಸಿ ಮೈಸೂರಿನ ಮೀಡಿಯಾ ಟಿವಿ ಸಹಯೋಗದೊಂದಿಗೆ ಮಹದೇಶ್ವರ ಸ್ವಾಮಿ ಇನ್ಫ್ರಾಟೆಕ್ ಮತ್ತು ಹೌಸಿಂಗ್ ಡೆವಲಪರ್ ಮೈಸೂರಿನ ಕುಮಾರ್ ದಿ ವೈಟ್ ಹೌಸ್ ನಲ್ಲಿ ನಡೆದ ಸಮಾರಂಭದಲ್ಲಿ ಕನ್ನಡದ ಹೆಮ್ಮೆಯ ಸೈನಿಕ ಪ್ರಶಸ್ತಿ ನೀಡಿ ಗೌರವಿಸಿದರು.
ಕನ್ನಡ ನೆಲ, ಜಲ, ಭಾಷೆ ಉಳಿವಿಗಾಗಿ ಮತ್ತು ರಾಜ್ಯದ ಯಾವುದೇ ಭಾಗದಲ್ಲಿ ಕನ್ನಡಕ್ಕೆ ಕನ್ನಡಿಗರಿಗೆ ಅನ್ಯಾಯವಾದರೂ ಮೊದಲು ಬಿದಿಗಿಳಿದು ಹೋರಾಟ ನಡೆಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಇವರ ಈ ಹೋರಾಟಗಳನ್ನು ಗಮನಿಸಿದ ಸಂಸ್ಥೆ ಯವರು ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆದ ಸಮಾರಂಭದಲ್ಲಿ “ಕನ್ನಡದ ಹೆಮ್ಮೆಯ ಸೈನಿಕ” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: