ಪ್ರಮುಖ ಸುದ್ದಿಮೈಸೂರು

ವೈದ್ಯಕೀಯ ಕಾಲೇಜಿನ ವಸತಿ ನಿಲಯ ನವೀಕರಿಸಬೇಕೋ, ಹೊಸ ಕಟ್ಟಡ ಕಟ್ಟಬೇಕೋ ಪರಿಶೀಲಿಸಿ ನಾಲ್ಕು ದಿನದಲ್ಲಿ ವರದಿ ನೀಡಲು ಸಚಿವ ಡಾ.ಕೆ.ಸುಧಾಕರ್ ಸೂಚನೆ

ಮೈಸೂರು,ನ.11:-ವೈದ್ಯಕೀಯ ಕಾಲೇಜಿನ ವಸತಿ ನಿಲಯ ನವೀಕರಿಸಬೇಕೋ ಅಥವಾ ಹೊಸ ಕಟ್ಟಡ ಕಟ್ಟಬೇಕೋ ಎಂಬುದನ್ನು ಇಂಜಿನಿಯರುಗಳಿಗೆ ಪರಿಶೀಲಿಸಿ ನಾಲ್ಕು ದಿನಗಳಲ್ಲಿ ವರದಿ ನೀಡಲು ಸೂಚಿಸಿದ್ದೇನೆ. ಅವರು ನಾಲ್ಕು ದಿನಗಳಲ್ಲಿ ವರದಿ ನೀಡಿದ ತಕ್ಷಣ ವರದಿಯನ್ವಯ ಕಾರ್ಯ ರೂಪಕ್ಕೆ ತರಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಅವರಿಂದು ವೈದ್ಯಕೀಯ ಕಾಲೇಜಿನ ವಸತಿ ನಿಲಯ ಪರಿಶೀಲಿಸಲು ಆಗಮಿಸಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಎಂಬಿಬಿಎಸ್ ವಿದ್ಯಾರ್ಥಿಗಳ ವಸತಿ ನಿಲಯ ಇದೆ, 58-60ವರ್ಷಗಳ ಬಹಳ ಹಳೆಯ ಕಟ್ಟಡವಾಗಿದೆ. ಹಾಗಾಗಿ ನಾವು ಮತ್ತು ನಮ್ಮ ಸ್ಥಳೀಯ ಶಾಸಕ ಎಲ್ ನಾಗೇಂದ್ರ ಅವರು ನಮ್ಮೆಲ್ಲ ಅಧಿಕಾರಿಗಳನ್ನು ಬೆಂಗಳೂರಿನಿಂದ ಇವತ್ತು ಕರೆದುಕೊಂಡು ಬಂದು ಮೈಸೂರಿನಲ್ಲಿ ವಿಶೇಷವಾಗಿ ವೈದ್ಯಕೀಯ ಕಾಲೇಜಿನಲ್ಲಿ ಸಭೆಯನ್ನುಮಾಡಿದ್ದೇವೆ. ಎಲ್ಲಾ ಆಸ್ಪತ್ರೆಗಳು ಯಾವ ರೀತಿ ನಡೆಯುತ್ತಿದೆ. ಯಾವ ಆಸ್ಪತ್ರೆ ವಿಶೇಷವಾಗಿ ಕೋವಿಡ್ ನ್ನು ನಿಯಂತ್ರಣ ಮಾಡುತ್ತದೆ. ಕೋವಿಡೇತರ ಸಮಸ್ಯೆಗಳಿಗೆ ಯಾವ ರೀತಿ ಕೆಲಸ ಮಾಡುತ್ತಿದ್ದಾರೆ ಎಂಬ ವಿಷಯದ ಬಗ್ಗೆ ಇಂದು ಸಮಗ್ರವಾದ ಚರ್ಚೆಯನ್ನು ಮಾಡಿದ್ದೇವೆ. ಅದಾದ ಮೇಲೆ ಈಗ ವಸತಿ ನಿಲಯವನ್ನು ವೀಕ್ಷಣೆ ಮಾಡಲಿಕ್ಕೆ ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕರು ರಾಜೀವ್ ಗಾಂಧಿ ವಿವಿಯ ಉಪಕುಲಪತಿಗಳು ನಾವೆಲ್ಲ ಬಂದಿದ್ದೇವೆ. ಕಾರಣವೇನೆಂದರೆ ನಿಜವಾಗಿಯೂ ಶೋಚನೀಯ ಪರಿಸ್ಥಿತಿಯಲ್ಲಿ ಅದರಲ್ಲೂ ವೈದ್ಯಕೀಯ ವಿದ್ಯಾರ್ಥಿಗಳು ನೋಡಿ ಬೇಸರ ಆಗಿದೆ ದುಃಖವಾಗಿದೆ. ತಕ್ಷಣ ಇಂಜಿನಿಯರ್ ಗಳನ್ನು ಕೂಡ ಕರೆತಂದು ಇದನ್ನು ನವೀಕರಿಸಬೇಕಾ ಅಥವಾ ಹೊಸದಾಗಿ ಕಟ್ಟಡವನ್ನು ಕಟ್ಟಬೇಕಾ ಎಂಬುದರ ಬಗ್ಗೆ ಮೂರ್ನಾಲ್ಕು ದಿನದೊಳಗಡೆಯೇ ಅವರಿಗೆ ವರದಿ ನೀಡುವಂತೆ ಹೇಳಿದ್ದೇನೆ. ಅವರು ವರದಿ ಕೊಟ್ಟ ತಕ್ಷಣ ಕಾರ್ಯಪ್ರವೃತ್ತರಾಗಿ ಹೊಸಕಟ್ಟಡ ಕಟ್ಟಲಿಕ್ಕೆ ವ್ಯವಸ್ಥೆ ಮಾಡುತ್ತೇವೆ, ಇಲ್ಲಾ ಏನು ನವೀಕರಿಸಬೇಕು ಅನ್ನೋದಾದರೆ ನವೀಕರಿಸುತ್ತೇವೆ. ರಾಜೀವ್ ಗಾಂಧಿ ವಿವಿ ನಿಧಿಯಿಂದ ಮತ್ತು ವೈದ್ಯಕೀಯ ಶಿಕ್ಷಣದ ಇಲಾಖೆಯ ಹಣ ಇದೆ ಎರಡನ್ನೂ ನೋಡಿ ಇದಕ್ಕೆ ಸೇರಿಸಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವಂಥದ್ದು. ಸಿಎಂ ಜೊತೆ ಮಾತನಾಡಿ ಪರ್ಯಾಯವನ್ನು ಕಂಡುಕೊಳ್ಳುವುದಾಗಿ ತಿಳಿಸಿದರು.
ರಾಜ್ಯದ 18ವೈದ್ಯಕೀಯ ಕಾಲೇಜಿದೆ. ಇದು ಅತ್ಯಂತ ಹಳೆಯ ವೈದ್ಯಕೀಯ ಕಾಲೇಜು. ಹಾಗಾಗಿ 58ವರ್ಷದ ಹಳೆಯ ಕಟ್ಟಡ ಸ್ವಾಭಾವಿಕವಾಗಿ ಹಳೆಯದಾಗಿದೆ. ದಯನೀಯ ಸ್ಥಿತಿಯಲ್ಲಿದೆ. ಇದನ್ನು ಹಿಂದಿನ ಸರ್ಕಾರಗಳು ಮಾಡಬೇಕಿತ್ತು. ಕಳೆದ 10ವರ್ಷಗಳ ಹಿಂದೆಯೇ ಮಾಡಬೇಕಿತ್ತು. ಆದರೆ ಅವರು ಯಾರೂ ಕೂಡ ಗಮನ ಹರಿಸಿಲ್ಲ. ನಮ್ಮ ಸರ್ಕಾರ ಖಂಡಿತವಾಗಿಯೂ ಗಮನ ಹರಿಸತ್ತೆ. ಉತ್ತಮವಾದ ವ್ಯವಸ್ಥೆಯನ್ನು ನಮ್ಮ ಸರ್ಕಾರ ಮಾಡಿಕೊಡತ್ತೆ. ನಾಲ್ಕು ವೈದ್ಯಕೀಯ ಕಾಲೇಜನ್ನು ಈ ವರ್ಷವೇ ಪ್ರಾರಂಭ ಮಾಡುತ್ತೇವೆ. ಈ ತಿಂಗಳು ಅಥವಾ ಮುಂದಿನ ತಿಂಗಳಲ್ಲಿ ಇನ್ನೂ ಮೂರು ಕಾಲೇಜಿಗೆ ಶಂಕು ಸ್ಥಾಪನೆಯನ್ನು ಸಿಎಂ ನೇತೃತ್ವದಲ್ಲಿ ಮಾಡ್ತಿದ್ದೇವೆ. ಒಟ್ಟಾರೆಯಾಗಿ ಈ ವರ್ಷವೇ ನಾಲ್ಕು ವೈದ್ಯಕೀಯ ಕಾಲೇಜುಗಳ ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಯಾದಗಿರಿ, ಹಾವೇರಿ ನಾಲ್ಕು ಹೊಸ ವೈದ್ಯಕೀಯ ಕಾಲೇಜು ಮಾಡ್ತಿದ್ದೇವೆ, ಮುಂದಿನ ವರ್ಷ ಮತ್ತಷ್ಟು ಮಾಡುತ್ತೇವೆ. ಕೋವಿಡ್ ಪ್ರಕರಣ ಬಹಳಷ್ಟು ಕಡಿಮೆ ಆಗುತ್ತಿದೆ. ನಿನ್ನೆ ಕೂಡ ಇಡೀ ರಾಜ್ಯದಲ್ಲಿ ಪಾಸಿಟಿವ್ 2% ಬಂದಿದೆ. 19 % ಇತ್ತು. ಅವಶ್ಯಕತೆ ಇದ್ದರೆ ಮಾತ್ರ ಕೋವಿಡ್ ಕೇರ್ ಸೆಂಟರ್ ನಲ್ಲಿ ಇರಿಸಬೇಕು ಇಲ್ಲಾಂದ್ರೆ ಯಾಕೆ? ರಿಹಾಬಿಲಿಟಿ ಸೆಂಟರ್ ನ್ನು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಈಗಾಗಲೇ ಮಾಡಲು ಹೇಳಿದ್ದು ಆಗ್ತಾ ಇದೆ ಎಂದರು.
ಕೋವಿಡ್ ಬಂದ ಮೇಲೆ ಮೊದಲ ಚಳಿಗಾಲ ನಾವು ಎದುರಿಸುವಂಥದ್ದು ಹಾಗಾಗಿ ಎಚ್ಚರಿಕೆಯಿಂದ ಇರಬೇಕೆಂದು ಜನರಲ್ಲಿ ಸರ್ಕಾರದ ವತಿಯಿಂದ ಮನವಿ ಮಾಡುತ್ತೇನೆ. ಎಲ್ಲ ಮಾರ್ಗಸೂಚಿಗಳನ್ನು ಕೂಡ ನಾವು ಬಿಡುಗಡೆ ಮಾಡಿದ್ದೇವೆ. ಎಲ್ಲರೂ ಬಹಳಷ್ಟು ಎಚ್ಚರಿಕೆಯಿಂದ ನಡೆದುಕೊಂಡರೆ ಮುನ್ನೆಚ್ಚರಿಕೆ ತಗೊಳುವುದರಿಂದ ಪಾರಾಗಬಹುದು. ದಸರಾ ಮುನ್ನೆಚ್ಚರಿಕೆಯಿಂದ ನಡೆಯಿತು. ತಲಕಾಡು ಪಂಚಲಿಂಗದರ್ಶನ ಡಿ.14ಕ್ಕೆ ಇದೆ. ಜಿಲ್ಲಾ ಉಸ್ತುವಾರಿ ಸಚಿವರು, ತಾಂತ್ರಿಕ ಸಲಹಾ ಸಮಿತಿ ಇದೆ. ಮತ್ತೆ ಕಳಿಸಿಕೊಡಲಾಗುವುದು. ದಸರಾ ಸಮಯದಲ್ಲೂ ಅವರನ್ನು ಕಳಿಸಿಕೊಡಲಾಗಿತ್ತು. ಅವರು ನೀಡಿದ ಸಲಹೆಯಂತೆ ಆಚರಿಸಲಾಯಿತು. ಐತಿಹಾಸಿಕ ಹಬ್ಬ ಅದಕ್ಕೂ ಕೂಡ ಅವರನ್ನು ಕಳಿಸಿಕೊಟ್ಟ ಅವರು ನೀಡಿದ ವರದಿಯಂತೆ ಆಚರಿಸಲಾಗುವುದು. ಕೋವಿಡ್ ವ್ಯಾಕ್ಸಿನ್ ಕುರಿತು ನಿಮ್ಮಷ್ಟೇ ನಿರೀಕ್ಷೆಯನ್ನು ನಾವು ಇಟ್ಟುಕೊಂಡಿದ್ದೇ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: