ಮೈಸೂರು

ಜೀವ ಹೋಗುತ್ತಿದ್ದವನಿಗೆ ರಕ್ಷಕನಾದ ಆರಕ್ಷಕರು

ಮೈಸೂರು,ನ.11:- ಜೀವ ಹೋಗುತ್ತಿದ್ದವನಿಗೆ ಆರಕ್ಷಕರು ರಕ್ಷಕರಾಗಿ ಮಾನವೀಯತೆ ಮೆರೆದ ಘಟನೆ ನಡೆದಿದೆ.

ಹೆಚ್ ಡಿ ಕೋಟೆಯ ಎಡತೊರೆ ಎರಡು ಬೈಕ್ ಗಳ ನಡುವೆ ಮುಖಾ ಮುಖಿ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಹೆಚ್ ಡಿ ಕೋಟೆ ತಾಲೂಕಿನ ಎಡತೊರೆ ಬಳಿ ಬೈಕ್ ಸವಾರರಿಬ್ಬರು ಮುಖಾ ಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಸವಾರ ಸಾವನ್ನಪ್ಪಿದ್ದು , ಮತ್ತೋರ್ವನ ಸ್ಥಿತಿ ಚಿಂತಾಜನಕವಾದ ಘಟನೆ ನಡೆದಿದೆ. ಆ್ಯಂಬುಲೆನ್ಸ್ ಬಾರದ ಕಾರಣ ತಕ್ಷಣ ಪೊಲೀಸ್ ಇಲಾಖೆಯ ಹೈವೇ ಪೆಟ್ರೋಲ್ ವಾಹನದ ದಫೇದಾರ್ ಗೋವಿಂದರಾಜು ಮತ್ತು ಎ ಎಸ್ ಐ ಮರಿಗೌಡ ಅವರು ಕಾರ್ಯಪ್ರವೃತ್ತರಾಗಿ ಆತನನ್ನು ಹೆ ಚ್ ಡಿ ಕೋಟೆಯ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ವ್ಯಕ್ತಿಯ ಜೀವವನ್ನು ಉಳಿಸಿ ಮಾನವೀಯತೆ ಮೆರೆದಿದ್ದಾರೆ.

Leave a Reply

comments

Related Articles

error: