
ಮೈಸೂರು
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶಾಂತಿಯುತ ಮುಷ್ಕರ
ಮೈಸೂರು,ನ.12:- ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸರ್ಕಾರಿ ಅನುದಾನಿತ ಶ್ರೀಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನ ನೌಕರರ ಸಂಘದ ವತಿಯಿಂದ ಪ್ರತಿಭಟನೆ ನಡೆಯುತ್ತಿದ್ದು ಇಂದು 6ನೇ ದಿನಕ್ಕೆ ಕಾಲಿರಿಸಿದೆ.
ಕಾಲೇಜು ಕ್ಯಾಂಪಸ್ ನಲ್ಲಿ ಬೇಡಿಕೆ ಈಡೇರಿಸುವವರೆಗೂ ಅನಿರ್ದಿಷ್ಟಾವಧಿಯ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಸಂಘಟಕರು ತಿಳಿಸಿದರು. ಶಾಂತಿಯುತ ಮುಷ್ಕರ ನಡೆಸುತ್ತಿರುವ ಪ್ರತಿಭಟನಾಕಾರರು ಮಾತನಾಡಿ ಅತಿಶೀಘ್ರವಾಗಿ ನಮ್ಮ ಮೂರು ತಿಂಗಳ ವೇತನವನ್ನು ಬಿಡುಗಡೆ ಮಾಡಬೇಕು. ಡಿಎ ಟೈಮ್ ಬಾಂಡ್, ಇಎಲ್, ಎಆರ್ ಆರ್ ಇಆರ್ ಎಸ್ ಸ್ಥಗಿತ ವೇತನ ಬಿಡುಗಡೆ ಮಾಡಬೇಕು, ಹೆಚ್ ಆರ್ ಎಂ ಎಸ್ ಶೀಘ್ರವಾಗಿ ಅನುಷ್ಠಾನಗೊಳಿಸಬೇಕು. ಎಸ್ ಆರ್ ಬುಕ್ ಗಳು 2014ರಿಂದ ಪರಿಷ್ಕರಣೆ ಆಗಿಲ್ಲ, ಅದನ್ನು ಪರಿಷ್ಕರಿಸಿ, ಎಜಿಪಿಯನ್ನು ಬಹಳಷ್ಟು ನೌಕರರಿಗೆ ಅನುಷ್ಠಾನಗೊಳಿಸಲಾಗಿಲ್ಲ, ಬೋಧಕೇತರ ಸಿಬ್ಬಂದಿಗಳ ಮುಂಬಡ್ತಿ, ಪದೋನ್ನತಿ ದೊರಕಿಲ್ಲ, ಸ್ಥಗಿತವಾತನಗಳು ಜಾರಿಯಾಗಿಲ್ಲ, ಎಐಸಿಟಿಇ ಅಫಿಲೇಷನ್ ಆಗಿರುವುದಿಲ್ಲ, 6ನೇ ವೇತನ ಆಯೋಗ ಗೊಂದಲಗಳು ಇನ್ನೂ ಇತ್ಯರ್ಥವಾಗಿಲ್ಲ ಇವುಗಳನ್ನು ಕೂಡಲೇ ಇತ್ಯರ್ಥಪಡಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. (ಕೆ.ಎಸ್,ಎಸ್.ಎಚ್)