ಲೈಫ್ & ಸ್ಟೈಲ್

ಪುರುಷರೇ ಮೊಟ್ಟೆಯ ಹಳದಿ ಭಾಗ ಬಿಸಾಡದೇ ಸೇವಿಸಿ!

ಮೊಟ್ಟೆ ತಿನ್ನುವ ಸಮಯದಲ್ಲಿ ಅದರಲ್ಲಿರುವ ಹಳದಿ ಭಾಗವನ್ನು  ಕೆಲವರು ಇಷ್ಟಪಡುವುದಿಲ್ಲ. ಬಿಸಾಡುತ್ತಾರೆ. ಆದರೆ ಪುರುಷರು ಈ ಭಾಗವನ್ನು ಬಿಸಾಡದೆ ತಿನ್ನಲೇಬೇಕು ಅನ್ನುತ್ತಾರಂತೆ ಡಯಟೀಶಿಯನ್ ಗಳು ಹಾಗಾದರೆ ಯಾಕಿರಬಹುದು?

 ವೀರ್ಯಾಣು: ಇದರಲ್ಲಿ ಓಮೇಗಾ 3 ಫೈಟಿ ಆ್ಯಸಿಡ್ಸ್ ಗಳಿದ್ದು, ವೀರ್ಯಾಣುಗಳ ಸಂಖ್ಯಾವೃದ್ಧಿಯಲ್ಲಿ ಸಹಾಯಕವಾಗಿವೆ.

ಕೂದಲು : ಇದರಲ್ಲಿ ತಾಮ್ರದ ಅಂಶ ಹೇರಳವಾಗಿದೆ. ಕೂದಲುದುರುವುದನ್ನು ತಪ್ಪಿಸುತ್ತದೆ.

ಮಾಂಸಖಂಡ : ಇದರಲ್ಲಿ ಪ್ರೋಟೀನ್ ಹೇರಳ ಪ್ರಮಾಣದಲ್ಲಿರುತ್ತದೆ. ಮಾಂಸಖಂಡಗಳು ಬಲಿಷ್ಠವಾಗುತ್ತವೆ.

ಎಲುಬು : ವಿಟಾಮಿನ್ ‘ಡಿ’ ಹೇರಳವಾಗಿದ್ದು, ಎಲುಬುಗಳು ಗಟ್ಟಿಮುಟ್ಟಾಗುತ್ತವೆ. ಅರ್ಥೈಟಿಸ್ ನಿಂದ ಮುಕ್ತಿ ದೊರಕಲಿದೆ.

ಜ್ಞಾಪಕಶಕ್ತಿ :ಇದರಲ್ಲಿ ಕೊಲಿನ್ ಹೇರಳವಾಗಿದ್ದು, ಬುದ್ಧಿಶಕ್ತಿಯನ್ನು ಹೆಚ್ಚಿಸುತ್ತದೆ. ಜ್ಞಾಪಕ ಶಕ್ತಿಯು ವೃದ್ಧಿಯಾಗುತ್ತದೆ.

ನೇತ್ರ:  ಇದರಲ್ಲಿರುವ ಕೆರೊಟೆನೈಡ್ ಇದ್ದು ಕಣ್ಣಿನ ದೃಷ್ಟಿಗೆ ಸಹಾಯಕವಾಗಿದೆ.

ರಕ್ತ :ಇದರಲ್ಲಿ ಕಬ್ಬಿಣದ ಅಂಶ ಹೇರಳವಾಗಿದ್ದು, ರಕ್ತದ ಕೊರತೆಯನ್ನು ನಿವಾರಿಸುತ್ತದೆ.

ಸ್ಮಾರ್ಟ್ ನೆಸ್ : ವಿಟಾಮಿನ್ ‘ಇ’ ಹೇರಳವಾಗಿದ್ದು, ಇದನ್ನು ಸೇವಿಸುವುದರಿಂದ ನಿಮ್ಮ ಸ್ಮಾರ್ಟ್ ನೆಸ್ ಹೆಚ್ಚಿ, ತ್ವಚೆಯಲ್ಲಿ ಹೊಳಪುಂಟಾಗಲಿದೆ.

 ದಂತಪಂಕ್ತಿ : ಇದರಲ್ಲಿ ಫಾಸ್ಪರೆಸ್ ಅಂಶವು ಹೇರಳವಾಗಿದ್ದು, ದಂತಪಂಕ್ತಿಗಳು ಬಲಿಷ್ಠವಾಗುತ್ತವೆ. ವಸಡುಗಳ ಸಮಸ್ಯೆ ಬರುವುದಿಲ್ಲ.

ರೋಗ ನಿವಾರಕ : ಇದರಲ್ಲಿ ವಿಟಾಮಿನ್ ‘ಕೆ’ ಇರಲಿದ್ದು, ಕ್ಯಾನ್ಸರ್ ನಂತಹ ಸೀರಿಯಸ್ ರೋಗಗಳಿಂದ ದೂರವಿರಲು ಸಹಾಯ ಮಾಡಲಿದೆ.

ಒಟ್ಟಿನಲ್ಲಿ ಮೊಟ್ಟೆಯ ಹಳದಿಭಾಗ ಸೇವನೆಯಿಂದ ಇಷ್ಟೆಲ್ಲ ಲಾಭ ಇದೆ ಅಂತಾಯಿತು. ಇನ್ನು ಮುಂದೆ ಅದನ್ನು ಬಿಸಾಡದೇ ಸೇವಿಸಿ. (ಎಸ್.ಎಚ್)

Leave a Reply

comments

Related Articles

error: