ದೇಶಪ್ರಮುಖ ಸುದ್ದಿ

ಜಲಾಂತರ್ಗಾಮಿ `ವಾಗಿರ್‌’ ಉದ್ಘಾಟನೆ

ಮುಂಬೈ,ನ.12- ಭಾರತೀಯ ನೌಕಾಪಡೆಯ ಐದನೇ ಸ್ಕಾರ್ಪಿನ್‌ ವರ್ಗಕ್ಕೆ ಸೇರಿದ ವಾಗಿರ್‌ ಜಲಾಂತರ್ಗಾಮಿಯನ್ನು ಇಂದು ದಕ್ಷಿಣ ಮುಂಬೈನ ಮಜಗಾಂವ್ ಹಡಗುಕಟ್ಟೆಯಲ್ಲಿ ಯಶಸ್ವಿಯಾಗಿ ಉದ್ಘಾಟಿಸಲಾಯಿತು.

ಜಲಾಂತರ್ಗಾಮಿಯು ಸುಧಾರಿತ ಶಬ್ಧಸಂವೇದಿ ಗ್ರಹಿಕೆ ತಂತ್ರಜ್ಞಾನದಂತಹ ಉತ್ಕೃಷ್ಟ ರಹಸ್ಯ ತಂತ್ರಗಳನ್ನು ಒಳಗೊಂಡಿದೆ.

ವಾಗಿರ್‌, ಭಾರತದಲ್ಲೇ ನಿರ್ಮಿಸುತ್ತಿರುವ ಆರು ಕಲ್ವರಿ ದರ್ಜೆಯ ಜಲಾಂತರ್ಗಾಮಿ ನೌಕೆಗಳ ಭಾಗವಾಗಿದೆ. ಈ ಜಲಾಂತರ್ಗಾಮಿಗಳನ್ನು ಭಾರತೀಯ ನೌಕಾಪಡೆಗಳ ಯೋಜನೆ-75ರ ಭಾಗವಾಗಿ ಫ್ರಾನ್ಸ್‌ ನೌಕಾಪಡೆ ಮತ್ತು ಡಿಸಿಎನ್‌ಎಸ್ ಇಂಧನ ಕಂಪನಿ ನಿರ್ಮಾಣ ಮಾಡುತ್ತಿವೆ.

ಈ ಜಲಾಂತರ್ಗಾಮಿ ನೌಕೆಗಳು ಮೇಲ್ಮೈ ವಿರೋಧಿ ಯುದ್ಧ, ಜಲಾಂತರ್ಗಾಮಿ ವಿರೋಧಿ ಯುದ್ಧ, ಗುಪ್ತಚರ ಮಾಹಿತಿ ಸಂಗ್ರಹಣೆ, ಮೈನ್ ಲೇಯಿಂಗ್, ಪ್ರದೇಶದ ಕಣ್ಗಾವಲು ಕಾರ್ಯಗಳನ್ನು ಕೈಗೊಳ್ಳಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: