ಮೈಸೂರು

ಜನಜಾಗೃತಿ ಅಭಿಯಾನದ ಸಮಾರೋಪ ಸಮಾರಂಭ : ಮೇ.4 ರಂದು

ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಮತ್ತು ಪ್ರಗತಿಪರ ಸಂಘಟನೆಗಳು ಟಿಪ್ಪುವಿನ ಐತಿಹಾಸಿಕ ಕೊಡುಗೆಗಳನ್ನು ಅನುಮಾನದ ಕಣ್ಣಿನಿಂದ  ನೋಡುವ ಜನರ ಮನಸ್ಥಿತಿಯನ್ನು ಬದಲಾಯಿಸಲು ರಾಜ್ಯಾದ್ಯಂತ 20 ದಿನಗಳ ಜನಜಾಗೃತಿ ಅಭಿಯಾನವನ್ನು ನಡೆಸುತ್ತಿದ್ದು, ಈ ಅಭಿಯಾನದ ಸಮಾರೋಪ ಸಮಾವೇಶವನ್ನು ಮೇ.4 ರಂದು ಮೈಸೂರಿನ ವಸ್ತು ಪ್ರದರ್ಶನದ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷ ಶಿವರಾಂ ಕೆ.ಎಸ್.ತಿಳಿಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ‍್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಈ ಅಭಿಯಾನದಲ್ಲಿ ದಲಿತರು, ಶೂದ್ರರು ಮತ್ತು ಮಹಿಳಾ ಸಂಘಟನೆಗಳ ಜೊತೆಗೆ ಟಿಪ್ಪು ಚರಿತ್ರೆಯ ಬಗ್ಗೆ ಸಂವಾದ ನಡೆಸುತ್ತಿದ್ದೇವೆ. ಅಲ್ಲದೇ ಎರಡು ಹಂತದ ಕಾರ್ಯಾಗಾರಗಳನ್ನು ನಡೆಸಲಾಗಿದೆ. ಕರ್ನಾಟಕದಾದ್ಯಂತ ಟಿಪ್ಪು ಕುರಿತ ಸಾಹಿತ್ಯ, ಲಾವಣಿ, ಕಿರುಪುಸ್ತಕಗಳು, ನಾಟಕ ಪ್ರದರ್ಶನದ ಯೋಜನೆಯೂ ಸಹ ಇದೆ ಎಂದು ಹೇಳಿದರು.

ಅಂದು ಬೆಳಿಗ್ಗೆ ಶ್ರೀರಂಗಪಟ್ಟಣದಲ್ಲಿ ಸಮಾವೇಶ ಜಾಥಾದ ಉದ್ಘಾಟನೆ ನಡೆಯಲಿದ್ದು, ಬೈಕ್ ರ್ಯಾಲಿಯ ಮೂಲಕ ಮೈಸೂರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯೊಂದಿಗೆ ಸಮಾವೇಶ ನಡೆಯುತ್ತದೆ. ನಂತರ ಸಂಜೆಯ ವೇಳೆಗೆ ವಸ್ತು ಪ್ರದರ್ಶನ ಮೈದಾನದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಸಮಾವೇಶದಲ್ಲಿ ವಿವಿಧ ಗಣ್ಯರ ಭಾಷಣ, ಕಿರುಚಿತ್ರ ಪ್ರದರ್ಶನ, ಸೂಫಿ ಮತ್ತು ಟಿಪ್ಪು ಲಾವಣಿಗಳ ಗಾಯನವೂ ಸೇರಿದಂತೆ ವೈವಿಧ್ಯ ಕಲಾಪ್ರಕಾರಗಳ ಅನಾವರಣ ನಡೆಯಲಿದೆ. ಈ ಸಮಾವೇಶಕ್ಕೆ ಮೈಸೂರು ಜಿಲ್ಲೆಯ ಮತ್ತು ರಾಜ್ಯದ ಇತರೆ ಜಿಲ್ಲೆಗಳಿಂದ ಸುಮಾರು 5 ರಿಂದ 6 ಸಾವಿರ ಜನರು ಸಮಾವೇಶಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ‍್ಠಿಯಲ್ಲಿ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಅಶೋಕ್, ಡಾ.ವಾಸು ಹೆಚ್.ವಿ, ಅಸಾದುಲ್ಲಾ, ತ್ರಿಮೂರ್ತಿ, ವರದರಾಜೇಂದ್ರ, ಪಿ.ಪಿ.ಬಾಬುರಾಜ್ ಮತ್ತು ಕೌಶನ್ ಬೇಗ್ ಹಾಜರಿದ್ದರು. (ಎಲ್.ಜಿ-ಎಸ್.ಎಚ್)

 

Leave a Reply

comments

Related Articles

error: