ಮೈಸೂರು

‘ಸಬ್ ಸೆ ಬಡಾ ಖಿಲಾಡಿ’ ವಿನೂತನ ಕಾರ್ಯಕ್ರಮಕ್ಕೆ ಚಾಲನೆ

ಎಸ್ ಬಿ ಆರ್ ಆರ್ ಮಹಾಜನ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಎಂಬಿಎ ವಿಭಾಗವು ಬೆಂಗಳೂರಿನ ಬಿಜ್ ಡಯಾಗ್ನಸ್ಟಿಕ್ ಸಹಯೋಗದೊಂದಿಗೆ  ಸೋಮವಾರ ಎಂಬಿಎ ವಿದ್ಯಾರ್ಥಿಗಳಿಗಾಗಿ ‘ಸಬ್ ಸೆ ಬಡಾ ಖಿಲಾಡಿ’ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ಈ ಕಾರ್ಯಕ್ರಮವನ್ನು ಮಹಾಜನ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಡಾ.ಟಿ.ವಿಜಯಲಕ್ಷ್ಮಿ ಮುರಳೀಧರ್  ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾಜನ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಸಿ.ಕೆ.ರೇಣುಕಾರ್ಯ ವಹಿಸಿದ್ದರು. ಬಳಿಕ ಮಾತನಾಡಿದ ಅವರು ಬಿಸಿನೆಸ್ ಗೇಮ್‍ಗಳ ಉಗಮ ಹಾಗೂ ವಿದ್ಯಾರ್ಥಿಗಳು ತೀರ್ಮಾನ ಕೈಗೊಳ್ಳುವ ಕೌಶಲ್ಯವನ್ನು ಉತ್ತಮಗೊಳಿಸುವಲ್ಲಿ  ಬಿಸಿನೆಸ್ ಗೇಮ್‍ಗಳ ಪಾತ್ರವನ್ನು ವಿವರಿಸಿದರು.

ಎಂಬಿಎ ವಿಭಾಗದ ನಿರ್ದೇಶಕ ಪ್ರೊ. ಎಸ್.ಆರ್.ಎಸ್ ಖಾದ್ರಿ, ಎಂಬಿಎ ವಿಭಾಗದ ಸಂಯೋಜಕ ಸೋಮಶೇಖರ್.ಐ.ಸಿ, ವೆಂಕಟ್ ರಮಣಿ ಮತ್ತಿತರರು ಉಪಸ್ಥಿತರಿದ್ದರು. ಸುಮಾರು 120 ಎಂಬಿಎ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. (ಎಸ್.ಎಚ್)

Leave a Reply

comments

Related Articles

error: