ಕ್ರೀಡೆಪ್ರಮುಖ ಸುದ್ದಿ

ಕುಕ್ಕುಟೋದ್ಯಮಕ್ಕೆ ಇಳಿಯಲಿದ್ದಾರಾ ಕ್ರಿಕೆಟ್ ಮಾಜಿ ನಾಯಕ ಎಂ.ಎಸ್.ಧೋನಿ?

ದೇಶ( ಭೋಪಾಲ್)ನ.14:- ಎಲ್ಲ ಮಾದರಿಯ ಅಂತರ‌ರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗಿರುವ
ಭಾರತದ ಮಾಜಿ ಕ್ರಿಕೆಟ್ ನಾಯಕ ಎಂಎಸ್ ಧೋನಿ ಏನು ಮಾಡಲಿದ್ದಾರೆಂಬ ಕುತೂಹಲ ಎಲ್ಲರಲ್ಲಿಯೂ ಇತ್ತು. ಅದಕ್ಕೀಗ ಉತ್ತರ ದೊರೆಯುತ್ತಿದೆ.
ಧೋನಿ ಕೋಳಿ ಸಾಕಾಣಿಕೆಯ ಉದ್ಯಮಕ್ಕೆ ಇಳಿಯಲು ಸಿದ್ದತೆ ನಡೆಸಿದ್ದಾರೆ. 2,000ದಷ್ಟು ಕಡಕ್‌ ನಾಥ್ ತಳಿಯ ಕೋಳಿಗಳಿಗೆ ಆರ್ಡರ್ ಮಾಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಕಡಕ್ ‌ನಾಥ್ ತಳಿ ಮೂಲತಃ ಮಧ್ಯಪ್ರದೇಶದ ಜಾಬುವಾ ಜಿಲ್ಲೆಯಲ್ಲಿದ್ದು, ಈ ತಳಿಯ ಕೋಳಿಗಳು ಶೀಘ್ರವೇ ರಾಂಚಿಯಲ್ಲಿರುವ ಧೋನಿಯವರ ಕೋಳಿ ಫಾರಮ್ ತಲುಪಲಿವೆ.

ಬುಡಕಟ್ಟು ಸಮುದಾಯದ ರೈತ ವಿನೋದ್ ಮೆಂಡಾ ಡಿಸೆಂಬರ್ 15ರಂದು ಧೋನಿಯ ಬೇಡಿಕೆಯ ಕೋಳಿಗಳನ್ನ್ನು ತಲುಪಿಸಲಿದ್ದಾರೆ. ಧೋನಿಯವರು ಮೊದಲಿಗೆ ತನ್ನ ಸ್ನೇಹಿತರ ಮೂಲಕ ತನ್ನನ್ನು ಸಂಪರ್ಕಿಸಿದ್ದರು. ತಾನು ಕೋಳಿಯನ್ನು ಸರಬರಾಜು ಮಾಡುವ ಸ್ಥಿತಿಯಲ್ಲಿಲ್ಲದ ಕಾರಣ ಥಂಡ್ಲಾದ ರೈತನನ್ನು ಸಂಪರ್ಕಿಸುವಂತೆ ತಿಳಿಸಿದ್ದೆ ಎಂದು ಕಡಕ್‌ ನಾಥ್ ಮುರ್ಗಾ ಸಂಶೋಧನ ಕೇಂದ್ರದದ ನಿರ್ದೇಶಕ ಐ.ಎಸ್. ತೋಮರ್ ಹೇಳಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: