ಸುದ್ದಿ ಸಂಕ್ಷಿಪ್ತ

ನ.18 : ಕೆ.ಬಸವಯ್ಯ ಅವರಿಗೆ ಅಭಿನಂದನಾ ಸಮಾರಂಭ

ಮೈಸೂರು.ನ14:- ಮೈಸೂರು ವಿಶ್ವವಿದ್ಯಾನಿಲಯ ಮಾನಸಗಂಗೋತ್ರಿಯ ರಸಾಯಶಾಸ್ತ್ರ ಅಧ್ಯಯನ ವಿಭಾಗದ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ. ಕೆ. ಬಸವಯ್ಯ ಅವರಿಗೆ ಸ್ಟ್ಯಾನ್ಪೋರ್ಡ್ ವಿಶ್ವವಿದ್ಯಾನಿಲಯ, ಯುಎಸ್ಎ ರವರು ಪ್ರಕಟಿಸಿರುವ ವಿಶ್ವದ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಇವರಿಗೆ ಅಭಿನಂದನಾ ಸಮಾರಂಭವನ್ನು ಕುಲಪತಿಗಳಾದ ಪ್ರೊ. ಜಿ.ಹೇಮಂತ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ನವೆಂಬರ್ 18 ರಂದು ಬೆಳಿಗ್ಗೆ 11 ಗಂಟೆಗೆ ಏರ್ಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮೈಸೂರು ವಿಶ್ವವಿದ್ಯಾನಿಲಯದ ಪ್ರೊ. ಶಿವಪ್ಪ ಆರ್. ಕುಲಸಚಿವರು ಮತ್ತು ಪ್ರೊ. ಕೆ. ಎಂ. ಮಹದೇವನ್, ಕುಲಸಚಿವ (ಪರೀಕ್ಷಾಂಗ) ರವರೊಂದಿಗೆ ಪ್ರೊ. ನಾಗರಾಜ ನಾಯಕ್, ಅಧ್ಯಕ್ಷರು, ರಸಾಯನಶಾಸ್ತ್ರ ಅಧ್ಯಯನ ವಿಭಾಗ, ಸಿಬ್ಬಂದಿವರ್ಗದವರು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

comments

Related Articles

error: