Uncategorized

ಸಮಾಜಮುಖಿಯಾಗಿ ಗುರುತಿಸಿಕೊಳ್ಳುತ್ತಿರುವ ಎಎಸ್ ಐ : ಮರು ಡಾಂಬರೀಕರಣ ಕಾರ್ಯ ನಡೆಸುತ್ತಿರುವ ಎಎಸ್ ಐ

ಮೈಸೂರು,ನ.14:- ಎ ಎಸ್ ಐ ದೊರೆಸ್ವಾಮಿ ನೇತೃತ್ವದಲ್ಲಿ ರಸ್ತೆ ಮರು ಡಾಂಬರೀಕರಣ ಕಾರ್ಯ ಆರಂಭವಾಗಿದ್ದು, ಎಸ್ ಐ ದೊರೆಸ್ವಾಮಿ ಹೆಚ್ ಡಿ‌ ಕೋಟೆ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಹೆಚ್ ಡಿ ಕೋಟೆ ತಾಲೂಕಿನಲ್ಲಿ ಜಾತ್ಯಾತೀತತೆ ಬಿಟ್ಟು ಅನೇಕ ಬಡ ಕುಟುಂಬಕ್ಕೆ ನೆರವಾಗಿ ಅವರ ಕಷ್ಟ ಸುಖಗಳಿಗೆ ಸ್ಪಂದಿಸುವಂತ ಗುಣ ಹೊಂದಿದ್ದಾರೆ .
ಜೊತೆಗೆ ಪೊಲೀಸ್ ಇಲಾಖೆಯಲ್ಲಿ ಇದ್ದು ಬಡ ಕುಟುಂಬದವರನ್ನು ಗುರುತಿಸಿ ಆಶ್ರಯ ಇಲ್ಲದವರಿಗೆ ಆಶ್ರಯ ವ್ಯವಸ್ಥೆ, ವಿದ್ಯಾಭ್ಯಾಸಕ್ಕೆ ಬೇಕಾದಂತಹ ಸೌಲಭ್ಯಗಳನ್ನು ಅನೇಕ ರೀತಿಯಲ್ಲಿ ಮಾಡಿದ್ದು ಇವರ ಸಹಾಯ ಹೇಳತೀರದಷ್ಟು. ವಿಶೇಷ ವಾಗಿ ಇವರ ಕೆಲಸವನ್ನು ಮೆಚ್ಚಿ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರು ಪೋನ್ ನ ಮುಖಾಂತರ ಇವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇವರು ಒಂದು ರೀತಿಯಲ್ಲಿ ಬಡ ಜನರ ಪಾಲಿಗೆ ದೇವರಾಗಿದ್ದಾರೆ ಎಂದರೂ ಸಹ ತಪ್ಪಾಗಲಾರದು. .ಹೆಚ್ ಡಿ ಕೋಟೆ ರಸ್ತೆಯಲ್ಲಿ ಹಲವು ದಿನಗಳಿಂದ ರಸ್ತೆಯು ಹಳ್ಳ ಕೊಳ್ಳಗಳಿಂದ ಕೂಡಿದ್ದು ಅದನ್ನು ಸಹ ಸಾರ್ವಜನಿಕರ ಹಿತಾಸಕ್ತಿಗೋಸ್ಕರ ಮರು ಡಾಂಬರೀಕರಣ ಮಾಡಿಸಿ ರಸ್ತೆಯಲ್ಲಿ ವಾಹನಗಳು ಅಪಾಘಾತವಾಗದೇ ಸುಗಮವಾಗಿ ಸಂಚರಿಸುವ ಪ್ರಯತ್ನದಲ್ಲೂ ಸಹ ತಲ್ಲೀನರಾಗಿದ್ದಾರೆ.

ಹೈವೆ ಪೆಟ್ರೋಲ್ ನ ಸಾಲುಂಡಿಪುಟ್ಟ, ಸಾಗರೆ ಗೋವಿಂದರಾಜು ಎ ಎಸ್ ಐ ದೊರೆಸ್ವಾಮಿ ಕಾರ್ಮಿಕರು ಭಾಗಿಯಾಗಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: