ಮೈಸೂರು

ನಿನ್ನೆ ಒಂದೇ ದಿನ ಸುಮಾರು 10ರಿಂದ 15ಹಾವುಗಳನ್ನು ಸಂರಕ್ಷಿಸಿದ ಸೂರ್ಯ ಕೀರ್ತಿ

ಮೈಸೂರು,ನ.17:- ಮೈಸೂರು ನಗರದ ವಿವಿಧೆಡೆಯಲ್ಲಿ ನಿನ್ನೆ ಒಂದೇ ದಿನ ಸುಮಾರು 10ರಿಂದ 15ಹಾವುಗಳನ್ನು ಸಂರಕ್ಷಿಸಿರುವುದಾಗಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ಸ್ನೇಕ್ ಶ್ಯಾಂ ಅವರ ಪುತ್ರ ,ಉರಗತಜ್ಞ ಸೂರ್ಯ ಕೀರ್ತಿ ತಿಳಿಸಿದರು.
ನಿನ್ನೆ ವಿವಿಧೆಡೆ ಹಾವುಗಳನ್ನು ಸಂರಕ್ಷಿಸಿರುವ ಕುರಿತು ಮಾತನಾಡಿದ ಅವರು ಒಂದೇ ದಿನ ಸುಮಾರು 10ರಿಂದ 15ಹಾವುಗಳು ಸಂರಕ್ಷಣೆಯಾಗಿದೆ. ಅದರಲ್ಲಿ ಮುಖ್ಯವಾಗಿ ಮಂಡಲ ಹಾವು ಸಂರಕ್ಷಣೆಯಾಗಿದೆ. ಸುಮಾರು 7.30ರ ಹೊತ್ತಿಗೆ ಮೇಟಗಳ್ಳಿ ಬಳಿಯ ಒಂದು ಗುಡಿಸಲಿನಲ್ಲಿ ಮಂಡಲ ಹಾವು ಬಂದಿತ್ತು. ಅದೊಂದು ಸಣ್ಣ ಗುಡಿಸಲು. ಗುಡಿಸಲಿನಲ್ಲಿ ವಾಸವಿದ್ದ ಗಂಡ ಹೆಂಡತಿ ಕಣ್ಣೀರು ಹಾಕಿದರು. ಚಾಪೆಯನ್ನು ಹಾಸಿಕೊಂಡು ನೆಲದಲ್ಲಿ ಮಲಗಿದ್ದರಂತೆ ಆಗ ಅವರ ಪಕ್ಕದಲ್ಲೇ ಹರಿದು ಹೋಗಿ, ಮೂಲೆಯಲ್ಲಿ ಮಲಗಿತ್ತು ಎಂದರಲ್ಲದೇ, ಸಂಬಂಧಪಟ್ಟವರಿಗೆ ಮಾಹಿತಿ ನೀಡದರೆ ಗುಡಿಸಲಿನಲ್ಲಿರುವ ದಂಪತಿಗೆ ಸ್ವಲ್ಪ ಸಹಾಯವಾಗಬಹುದು ಅವರು ಏನಾದರೂ ವ್ಯವಸ್ಥೆಯನ್ನು ಈ ಮನೆಯವರಿಗೆ ಮಾಡಿಕೊಡಬಹುದು ಎಂದರು.
2ನೇ ಹಾವು ಸುಮಾರು 9ಗಂಟೆಯಷ್ಟರಲ್ಲಿ ಆಲನಹಳ್ಳಿ ಪೊಲೀಸ್ ಲೇ ಔಟ್ ನ ಗಣಪತಿ ದೇವಸ್ಥಾನದಲ್ಲಿ ಮಂಡಲ ಹಾವು ಸಂರಕ್ಷಿಸಲಾಗಿದೆ. ಶಕ್ತಿ ನಗರದಲ್ಲಿ ಕೂಡ ಸಂರಕ್ಷಿಸಲಾಗಿದೆ. ಮನೆಗೆ ಬಂದು ರಾತ್ರಿ ಎರಡೂವರೆ ಸುಮಾರಿಗೆ ಮಲಗಿದ್ದ ವೇಳೆ ರೈಲ್ವೆ ಸ್ಟೇಶನ್ ಡಿವಿಜನ್ ಮ್ಯಾನೇಜರ್ ಕಛೇರಿಯಿಂದ ಕರೆ ಬಂತು, ಲೇಡೀಸ್ ಟಾಯ್ ಲೆಟ್ ಲ್ಲಿ ಒಂದು ಹಾವು ಸೇರಿಕೊಂಡಿದೆ ಅಂತ. ಎರಡೂವರೆಗೆ ಎದ್ದವನು ತಲುಪುವಷ್ಟರಲ್ಲಿ 3ಗಂಟೆ ಆಯಿತು. ಸ್ವಿಚ್ ಬೋರ್ಡ್ ಹತ್ತಿರ ಹರಿದಾಡುತ್ತಿರುವುದನ್ನು ನೋಡಿ ನನಗೆ ಕರೆ ಮಾಡಿದ್ದಾರೆ. ಕಳೆದ ಐದು ದಿನಗಳಲ್ಲೇ 40ಕ್ಕೂ ಹೆಚ್ಚು ಹಾವುಗಳನ್ನು ಸಂರಕ್ಷಣೆ ಮಾಡಿದ್ದೇನೆ. ಮಂಡಲ ಹಾವಿನ ಸೀಸನ್ ಆಗಿರುವುದರಿಂದ ನಾನು ಮತ್ತು ನನ್ನ ತಂದೆಯವರು ಕೇವಲ 15ದಿನದಲ್ಲೇ 60-70ಮಂಡಲ ಹಾವುಗಳನ್ನು ಸಂರಕ್ಷಣೆ ಮಾಡಿದ್ದೇವೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: