ಮೈಸೂರು

ದೇವರಾಜ ಪೊಲೀಸ್ ಠಾಣಾ ವತಿಯಿಂದ ಕೊರೋನಾ ವೈರಸ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ

ಮೈಸೂರು,ನ.17:- ದೇವರಾಜ ಪೊಲೀಸ್ ಠಾಣೆಯ ಎಸಿಪಿ ಶಶಿಧರ್ ನೇತೃತ್ವದಲ್ಲಿಂದು ಸಾರ್ವಜನಿಕರಿಗೆ ಕೊರೋನಾ ವೈರಸ್ ಕುರಿತು ಜಾಗೃತಿ ಮೂಡಿಸಲಾಯಿತು.
ಚಿಕ್ಕ ಗಡಿಯಾರ ಸರ್ಕಲ್ ಬಳಿ ವಾಹನ ಸವಾರರಿಗೆ, ಬೀದಿ ಬದಿಯ ವ್ಯಾಪಾರಿಗಳಿಗೆ ಮತ್ತು ಆಟೋ ಚಾಲಕರು ಗಳಿಗೆ ಉಚಿತವಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಲಾಯಿತು. ನಂತರ ಆಟೋ ಗಳಿಗೆ ಮತ್ತು ಪೊಲೀಸ್ ವಾಹನಗಳಿಗೆ ಕೊರೋನಾ ಜಾಗೃತಿ ಮೂಡಿಸುವ ಸ್ಟಿಕ್ಕರ್ಸ್ ಅಂಟಿ ಸಲಾಯಿತು.
ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ಕಡ್ಡಾಯವಾಗಿ ಮಾಸ್ಕ್ ಧರಿಸಿ ಹೊರಬನ್ನಿ, ನಿಮ್ಮ ಕೆಲಸಗಳು ಮುಗಿದ ಬಳಿಕ ಆಗಿಂದಾಗ್ಗೆ ಕೈಕಾಲುಗಳನ್ನು ತೊಳೆದುಕೊಳ್ಳಿ, ಆದಷ್ಟು ಬಿಸಿನೀರು ಹಾಗೂ ಬಿಸಿ ಆಹಾರವನ್ನು ಸೇವಿಸಿ, ಎಲ್ಲರೂ ಆರೋಗ್ಯ ಸೇತು ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ, ಬಳಸಿದ ಮಾಸ್ಕ್ ನ್ನು ಎಲ್ಲೆಂದರಲ್ಲಿ ಎಸೆಯಬೇಡಿ, ಅನಗತ್ಯ ಪ್ರಯಾಣವನ್ನು ನಿಲ್ಲಿಸಿ, ಅನಗತ್ಯ ಸಮಾರಂಭ, ಗುಂಪು ಸೇರುವುದನ್ನು ನಿಲ್ಲಿಸಿ, ನೇರಸ್ಪರ್ಶ ಮಾಡುವುದನ್ನು ನಿಲ್ಲಿಸಿ ಎಂದು ಇದೇ ವೇಳೆ ಪೊಲೀಸರು ಜನರಲ್ಲಿ ಜಾಗೃತಿ ಮೂಡಿಸಿದರು.
ಈ ಸಂದರ್ಭ ಇನ್ಸಪೆಕ್ಟರ್ ಪ್ರಸನ್ನ, ಸಬ್ ಇನ್ಸಪೆಕ್ಟರ್ ಲೀಲಾವತಿ ಸಿಬ್ಬಂದಿಗಳಾದ ಆಂಜನೇಯ ಮತ್ತಿತರರು ಉಪಸ್ಥಿತರಿದ್ದು, ಜನರಲ್ಲಿ ಜಾಗೃತಿ ಮೂಡಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: