ದೇಶಪ್ರಮುಖ ಸುದ್ದಿ

ನಟಿ ಖುಷ್ಬೂ ಸುಂದರ್ ಕಾರು ಅಪಘಾತ: ಅಪಾಯದಿಂದ ಪಾರು

ಮೇಲ್‌ಮರವತ್ತೂರ್‌, (ಚೆನ್ನೈ),ನ.18-ನಟಿ ಹಾಗೂ ತಮಿಳುನಾಡು ಬಿಜೆಪಿ ನಾಯಕಿ ಖುಷ್ಬೂ ಸುಂದರ್‌ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್ ಅವರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಇಂದು ಬೆಳಿಗ್ಗೆ ಮೇಲ್‌ಮರವತ್ತೂರ್ ಸಮೀಪ ಘಟನೆ ಸಂಭವಿಸಿದೆ. ವೇಗವಾಗಿ ಬಂದ ಟ್ಯಾಂಕರ್ ಖುಷ್ಬೂ ಅವರಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ಜಖಂ ಆಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದು, ಖುಷ್ಬೂ ಕಡಲೂರು ಕಡೆಗೆ ಪ್ರಯಾಣ ಮುಂದುವರಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಖುಷ್ಬೂ, ‘ಮೇಲ್‌ಮರವತ್ತೂರ್‌ ಸಮೀಪ ಅಪಘಾತವಾಗಿದೆ. ಟ್ಯಾಂಕರ್ ಒಂದು ಕಾರಿಗೆ ಗುದ್ದಿದೆ. ನಿಮ್ಮೆಲ್ಲರ ಆಶೀರ್ವಾದ ಹಾಗೂ ದೇವರ ಕೃಪೆಯಿಂದ ನಾನು ಸುರಕ್ಷಿತವಾಗಿದ್ದೇನೆ. ಕಡೂರು ಕಡೆಗೆ ನನ್ನ ಪ್ರಯಾಣ ಮುಂದುವರಿಸುತ್ತಿದ್ದೇನೆ, ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ. ನನ್ನ ಪತಿ ನಂಬಿರುವ ದೇವರು ಮುರುಗನ್‌ ನಮ್ಮನ್ನು ಬದುಕಿಸಿದ…’ ಎಂದಿದ್ದಾರೆ.

ನಮ್ಮ ಕಾರು ಸರಿಯಾದ ಮಾರ್ಗದಲ್ಲಿಯೇ ಸಾಗುತ್ತಿತ್ತು, ಎಲ್ಲಿಂದಲೋ ಬಂದ ಟ್ಯಾಂಕರ್‌ ಕಾರಿನತ್ತ ನುಗ್ಗಿತು. ಪೊಲೀಸರು ಚಾಲಕನನ್ನು ಪ್ರಶ್ನಿಸುತ್ತಿದ್ದಾರೆ, ತನಿಖೆ ಮುಂದುವರಿಸಿದ್ದಾರೆ ಎಂದು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: