ಮೈಸೂರು

ಅಪರಿಚಿತ ಮಹಿಳೆಯ ಶವ ಪತ್ತೆ : ವಾರಸುದಾರರಿಗೆ ಮನವಿ

ಪಾಂಡವಪುರ ರೈಲು ನಿಲ್ದಾಣದಲ್ಲಿ ಸುಮಾರು 40ರ ವಯೋಮಾನದ ಮಹಿಳೆಯೋರ್ವರು ವಿಷ ಪ್ರಾಷನ  ಮಾಡಿ ಬಿದ್ದಿದ್ದು, ಚಿಕಿತ್ಸೆಗಾಗಿ ಕೆ.ಆರ್. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಏ.7ರಂದು ಮೃತಪಟ್ಟಿರುತ್ತಾರೆ.

ಮೈಸೂರು ರೈಲ್ವೆ ಪೊಲೀಸ್ ಠಾಣೆಯವರು ಅಸಹಜ ಮರಣ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು, ವಾರಸುದಾರರು ಪತ್ತೆಯಾಗಿಲ್ಲ. ಮಹಿಳೆ 5ಅಡಿ ಎತ್ತರವಿದ್ದು, ಕೋಲುಮುಖ, ನೀಳವಾದ ಮೂಗು, ಗೋಧಿ ಮೈ ಬಣ್ಣ, ತಲೆಯಲ್ಲಿ ಸುಮಾರು 2 ಅಡಿ ಕಪ್ಪು ಕೂದಲನ್ನು ಹೊಂದಿರುತ್ತಾರೆ. ಕತ್ತಿನಲ್ಲಿ ಕರಿಮಣಿ ಸರ ಹಾಗೂ ಕಾಲುಂಗುರವಿದೆ. ಹೂವಿನ ಚಿತ್ರವಿರುವ ಹಸಿರು ಬಣ್ಣದ ಸೀರೆ, ಹಸಿರು ಬಣ್ಣದ ಒಳಲಂಗ, ಪಾಚಿ ಬಣ್ಣದ ರವಿಕೆ , ಬಾರ್ಡರ್ ಧರಿಸಿದ್ದು, ಮೃತ ದೇಹವನ್ನು ಮೈಸೂರಿನ ಮೆಡಿಕಲ್ ಕಾಲೇಜಿನ ಶವಗಾರದಲ್ಲಿಡಲಾಗಿದೆ.

ಈ ಮೃತ ಮಹಿಳೆಯ ವಾರಸುದಾರರ ಬಗ್ಗೆ ಮಾಹಿತಿ ಇರುವವರು ಮೈಸೂರು ರೈಲ್ವೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 0821-2516579 ಯನ್ನು ಸಂಪರ್ಕಿಸಬಹುದಾಗಿದೆ. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: