ಮೈಸೂರು

ಭಾರೀ ಮಳೆ : ವಿವಿಧೆಡೆ ಅನಾಹುತ

ಮೈಸೂರಿನ ವಿವಿಧೆಡೆ ಸೋಮವಾರ ಸುರಿದ ಭಾರೀ ಮಳೆಗೆ ಹಲವೆಡೆ ಅನಾಹುತಗಳು ಸಂಭವಿಸಿವೆ.

ಸೋಮವಾರ ರಾತ್ರಿ ಭಾರೀ ಮಳೆ ಸುರಿದಿದ್ದು, ಮಳೆಗೆ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು ಹಲವು ಮನೆಗಳಿಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸಂಜೆ 7.30ರ ಸುಮಾರಿಗೆ ದಪ್ಪ ಹನಿಯಲ್ಲಿ ಆರಂಭವಾದ ಭಾರೀ ಗಾಳಿ ಮಳೆಗೆ ನಗರದ ಕಲ್ಯಾಣಗಿರಿಯ ಅಜೀಜ್ ಸೇಠ್ ನಗರದ ಬೀಡಿ ಕಾರ್ಮಿಕರ ಕೇಂದ್ರದ ಆಸ್ಪತ್ರೆ ಆವರಣದಲ್ಲಿ ಬೃಹತ್ ಆಲದ ಮರವೊಂದು ಬಿದ್ದಿದ್ದು, ಎರಡು ಮನೆಗಳಿಗೆ ಹಾನಿಯಾಗಿದೆ.

ಡಾ.ರಾಜ್ ಕುಮಾರ್ ರಸ್ತೆಯಲ್ಲಿರುವ ವೆಂಕಟೇಶ್ವರ ದೇವಾಲಯದ ಹಿಂಭಾಗದಲ್ಲಿ ದೊಡ್ಡ ಗಾತ್ರದ ಮರವೊಂದು ಉರುಳಿ ಬಿದ್ದು ವಿದ್ಯುತ್ ತಂತಿಗಳು ತುಂಡಾಗಿವೆ. ಆರ್ಮಿ ಕ್ವಾರ್ಟಸ್ ಸಮೀಪ ಹಾಗೂ ಪೌರಕಾರಮಿಕರ ಕಾಲೋನಿಯಲ್ಲಿಯೂ ಮರಗಳು ಮುರಿದು ಬಿದ್ದಿವೆ. ಅಗ್ರಹಾರದ ಸಯ್ಯಾಜಿರಾವ್ ರಸ್ತೆಯಲ್ಲಿ ಭಾರೀ ಗಾತ್ರದ ಮರವೊಂದು ಬಿದ್ದ ಪರಿಣಾಮ ಕೆಲಕಾಲ ಸಂಚಾರ ಅಸ್ತವ್ಯಸ್ತವಾಯಿತು. ನಾಯ್ಡುನಗರ, ಕೆಸರೆ ಸೇರಿದಂತೆ ಹಲವು ಕಡೆಗಳಲ್ಲಿ ಮರಗಳು ಬಿದ್ದು ಅನಾಹುತ ಸೃಷ್ಟಿಯಾಗಿತ್ತು. ತಕ್ಷಣ ಪಾಲಿಕೆಯ ಅಭಯಪಡೆ ಸ್ಥಳಕ್ಕೆ ಆಗಮಿಸಿ ತೆರವು ಕಾರ್ಯಾಚರಣೆ ನಡೆಸಿದೆ. (ಕೆ.ಎಸ್.ಎಸ್.ಎಚ್)

Leave a Reply

comments

Related Articles

error: