ಪ್ರಮುಖ ಸುದ್ದಿಮನರಂಜನೆ

ರಸ್ತೆ ನಿಯಮ ಉಲ್ಲಂಘನೆ : ಬಾಲಿವುಡ್ ನಟಿ ತಾಪ್ಸಿ ಪನ್ನುಗೆ ದಂಡ !


ದೇಶ(ನವದೆಹಲಿ)ನ.19:- ರಸ್ತೆ ನಿಯಮ ಉಲ್ಲಂಘಿಸಿದ ಬಾಲಿವುಡ್ ನಟಿ ತಾಪ್ಸಿ ಪನ್ನು ಗೆ ದಂಡ ವಿಧಿಸಲಾಗಿದೆ.
ನಟಿ ತಾಪ್ಸಿ ಪನ್ನು ‘ರಶ್ಮಿ ರಾಕೆಟ್ ‘ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಏತನ್ಮಧ್ಯೆ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಟೋ ಒಂದನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಹೆಲ್ಮೆಟ್ ಧರಿಸದೇ ಬೈಕ್ ಚಾಲನೆ ಮಾಡಿಕೊಂಡು ಹೋಗುತ್ತಿರುವುದು ಕಂಡು ಬರುತ್ತಿದೆ.

ಪೋಟೋ ಜೊತೆ ನನ್ನ ಬೈಕ್ ಚಾಲನೆಯ ದೃಶ್ಯದ ಕೆಲವೇ ಕ್ಷಣಗಳ ಮೊದಲು ದಂಡ ವಿಧಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ. ಯಾಕೆಂದರೆ ನಾನು ಹೆಲ್ಮೆಟ್ ಧರಿಸಿರಲಿಲ್ಲ ಎಂದೂ ಹೇಳಿಕೊಂಡಿದ್ದಾರೆ. ಬೈಕ್ ಚಲಾಯಿಸುತ್ತಿರುವ ಹಿಂಬದಿಯ ಚಿತ್ರವನ್ನು ಪೋಸ್ಟ್ ಮಾಡಿದ್ದು ಅದರಲ್ಲಿ ಹೆಲ್ಮೆಟ್ ಧರಿಸದಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: