ಮೈಸೂರು

ಜಿಲ್ಲಾ ಖಜಾನೆ ನೌಕರರ ಸಂಘದ ಅಭಿವೃದ್ಧಿಗೆ ಪ್ರತಿಯೊಬ್ಬ ಸದಸ್ಯರು ಶ್ರಮಿಸಬೇಕು : ಯಶೋಧ

ಮೈಸೂರು.ನ.19:- ಜಿಲ್ಲಾ ಖಜಾನೆ ನೌಕರರ ಸಂಘದ ಅಭಿವೃದ್ಧಿಗೆ ಪ್ರತಿಯೊಬ್ಬ ಸದಸ್ಯರು ಶ್ರಮಿಸಬೇಕು ಎಂದು ಜಿಲ್ಲಾ ಖಜಾನೆಯ ಜಂಟಿ ನಿರ್ದೇಶಕರಾದ ಯಶೋಧ ಅವರು ಹೇಳಿದರು.

ಅವರಿಂದು ವಾರ್ತಾ ಭವನದ ಸಭಾಂಗಣದಲ್ಲಿ ಮೈಸೂರು ಜಿಲ್ಲಾ ಖಜಾನೆ ನೌಕರರ ಸಂಘ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಖಜಾನೆ ನೌಕರರ ಸಂಘವು ತನ್ನದೇ ಆದ ಗುರಿ ಮತ್ತು ಉದ್ದೇಶಗಳನ್ನು ಒಳಗೊಂಡು ಸ್ಥಾಪಿತಗೊಂಡಿದೆ. ಎಲ್ಲರೂ ಸಂಘದ ಹಿತ ಲೋಕದ ಹಿತ ಎಂಬಂತೆ ಬಹಳ ಪ್ರಮಾಣಿಕತೆಯಿಂದ ಸಂಘದಲ್ಲಿ ಕಾರ್ಯನಿರ್ವಹಿಸಬೇಕು ಎಂದು ಮನವಿ ಮಾಡಿದರು.
ಬಳಿಕ ಜಿಲ್ಲಾ ಖಜಾನೆ ನೌಕರರ ಸಂಘದ ಅಧ್ಯಕ್ಷರಾದ ಆರ್.ಹೇಮಂತ್ ಕುಮಾರ್ ಅವರು ಮಾತನಾಡಿ ಸಂಘವು ಒಂದು ಕುಟುಂಬವಿದ್ದಂತೆ ಆದ್ದರಿಂದ ಸಂಘದಲ್ಲಿ ತಮ್ಮನ್ನು ಒಗ್ಗೂಡಿಸಿಕೊಂಡು ಕಾರ್ಯನಿರ್ವಹಿಸಬೇಕಿದೆ ಎಂದರು.
ಸಂಘವು ಎಲ್ಲಾ ಸಮಸ್ಯೆಗಳಿಗೆ ಸೇತುವೆ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ ಹಾಗೂ ಕರ್ನಾಟಕ ರಾಜ್ಯ ಖಜಾನೆ ನೌಕರರ ಸಂಘದ ಅಧ್ಯಕ್ಷರಾದ ಷಡಕ್ಷರಿ ಅವರ ನಿರ್ದೇಶನದಂತೆ ಜಿಲ್ಲಾ ಖಜಾನೆ ನೌಕರರ ಸಂಘವು ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದರು.

ಇಲಾಖೆಯ ಬಡ್ತಿ ವಿಚಾರವನ್ನು ಪರಿಹರಿಸಲು ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಹಾಗೂ ಮುಂದಿನ ದಿನಗಳಲ್ಲಿ ಜಿಲ್ಲಾ ಖಜಾನೆ ನೌಕರರ ಸಂಘವು ಖಜಾನೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಉಚಿತ ಆರೋಗ್ಯ ಕಾರ್ಡ್ ನೀಡಲಾಗುವುದು ಎಂದರು.
ರಾಜ್ಯ ಮಟ್ಟದಿಂದ ಜಿಲ್ಲಾ ಮಟ್ಟದವರೆಗೂ ಖಜಾನೆ ನೌಕರರ ಸಂಘವು ಸ್ಥಾಪಿಸಿರುವುದು ಸಂತಸದ ವಿಷಯ. ಜಿಲ್ಲಾ ಖಜಾನೆ ನೌಕರರ ಸಂಘವು ಸಮಸ್ಯೆಗಳಿಗೆ ಸ್ಪಂದಿಸಿ ಇತರೆ ಸಂಘಗಳಿಗೆ ಮಾದರಿಯಾಗಬೇಕು ಎಂದು ಜಿಲ್ಲಾ ಖಜಾನೆ ನೌಕರರ ಸಂಘದ ಸಹಾಯಕ ನಿರ್ದೇಶಕರಾದ ಗಿರಿಜಾಂಬ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಖಜಾನೆ ನೌಕರರ ಸಂಘದ ಉಪಾಧ್ಯಕ್ಷ ಎನ್.ಕೆ ಗಣೇಶ್. ಗೌರವಾಧ್ಯಕ್ಷ ನಾಗರಾಜು ಹಾಗೂ ಇನ್ನಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: