ಮೈಸೂರು

ವಿಜೃಂಭಣೆಯಿಂದ ನಡೆದ ಗುಂಜ ನರಸಿಂಹಸ್ವಾಮಿ ಬ್ರಹ್ಮರಥೊತ್ಸವ

ವೈಭವದಿಂದ ಜರುಗಿದ ಟಿ. ನರಸೀಪುರದ ಗುಂಜ ನರಸಿಂಹಸ್ವಾಮಿಯ ಬ್ರಹ್ಮರಥೊತ್ಸವವು ಅತ್ಯಂತ ವಿಜೃಂಭಣೆಯಿಂದ ನಡೆಯಿತು.

ಸಾವಿರಾರು ಭಕ್ತರು ಹರ್ಷೊದ್ಗಾರದಿಂದ ರಥ ಎಳೆದು, ನರಸಿಂಹಸ್ಬಾಮಿಯ ದರ್ಶನವನ್ನು ಪಡೆದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಮತ್ತು ಕೆಇಬಿ ಇಲಾಖೆ ಕಣ್ಗಾವಲಿರಿಸಿತ್ತು. ದಣಿದು ಬಂದ ಭಕ್ತಾದಿಗಳಿಗೆ ನೂರಾರು ಕೇಂದ್ರ ಗಳಲ್ಲಿ ಹರಕೆ ಹೊತ್ತವರು  ಪಾನಕ ಮಜ್ಜಿಗೆಯನ್ನು ವಿತರಿಸಿದರು. ದೇವಾಲಯದಿಂದ ಹೊರಟ ರಥವು ಪಟ್ಟಣದ ರಥ ಬೀದಿಗಳಲ್ಲಿ ಸಂಚರಿಸಿ ಮರಳಿ ದೇಗುಲವನ್ನು ತಲುಪಿತು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: