ಕರ್ನಾಟಕಮನರಂಜನೆ

ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ನಟ ದರ್ಶಕ್ ಗೌಡ-ನಟಿ ಶಿಲ್ಪಾ ರವಿ

ಬೆಂಗಳೂರು,ನ.19-ಕಿರುತೆರೆ ನಟ ದರ್ಶಕ್ ಗೌಡ, ನಟಿ ಶಿಲ್ಪಾ ರವಿ ಅವರು ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಇದೇ ತಿಂಗಳ 25 ರಂದು ವೈವಾಹಿಕ ಜೀವನಕ್ಕೆ ಕಾಲಿಡಲು ಇವರಿಬ್ಬರು ಸಜ್ಜಾಗಿದ್ದಾರೆ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ತುಂಬಾ ಖಾಸಗಿಯಾಗಿ ಮದುವೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎರಡು ಕುಟುಂಬದವರು ಹಾಗೂ ಆತ್ಮೀಯರು ಮಾತ್ರ ವಿವಾಹದಲ್ಲಿ ಭಾಗಿಯಾಗಲಿದ್ದಾರೆ.

ಇವರಿಬ್ಬರ ಮದುವೆ ಮೇ ತಿಂಗಳಿನಲ್ಲಿಯೇ ನಡೆಯಬೇಕಿತ್ತು. ಆದರೆ ಕೊರೊನಾದಿಂದಾಗಿ ಮದುವೆಯನ್ನು ಮುಂದೂಡಲಾಗಿತ್ತು. ಇದೀಗ ಮದುವೆಯಾಗಲು ನವೆಂಬರ್ 25 ರಂದು ಮದುವೆಯಾಗುತ್ತಿದ್ದಾರೆ.

ನಾನು ಮತ್ತು ಶಿಲ್ಪಾ ಒಂದೇ ವಾಹಿನಿಯಲ್ಲಿ ಕೆಲಸ ಮಾಡಿದ್ದೇವೆ. ಪ್ರಶಸ್ತಿ ಸಮಾರಂಭವೊಂದರಲ್ಲಿ ನಾನು ಅವಳನ್ನು ಭೇಟಿಯಾದೆ. ಆಮೇಲೆ ನನ್ನ ಸಹೋದ್ಯೋಗಿಯ ತಂಗಿ ಅಂತ ತಿಳಿಯಿತು. ಹೀಗೆ ನಮ್ಮ ಸ್ನೇಹ ಬೆಳೆಯಿತು. ಒಂದು ವರ್ಷವಾದ ನಂತರ ನಾನೇ ಅವಳ ಮುಂದೆ ಬಂದು ನೇರವಾಗಿ ಮದುವೆಯಾಗುತ್ತೀಯಾ ಅಂತ ಕೇಳಿದೆ. ನನ್ನನ್ನು ಮದುವೆಯಾಗಲು ಶಿಲ್ಪಾಗೆ ಯಾವುದೇ ಷರತ್ತು, ಸಮಸ್ಯೆ ಏನೂ ಇರಲಿಲ್ಲ. ಆದರೆ ಅವಳ ಪಾಲಕರನ್ನು ಒಪ್ಪಿಸಬೇಕಿತ್ತು. ನಾನು ಅವರ ಅಪ್ಪ-ಅಮ್ಮನನ್ನು ಭೇಟಿ ಮಾಡಿ ಮದುವೆ ಬಗ್ಗೆ ಮಾತನಾಡಿದೆ. ನನ್ನ ಪಾಲಕರು ಕೂಡ ಒಪ್ಪಿ ಈಗ ಅದನ್ನು ಮದುವೆವರೆಗೆ ತೆಗೆದುಕೊಂಡು ಹೋಗಿದ್ದಾರೆ. ಹೊಸ ಜೀವನ ಆರಂಭಿಸಲು ನಾವಿಬ್ಬರು ಕಾತುರದಿಂದಿದ್ದೇವೆ ಎಂದಿದ್ದಾರೆ ದರ್ಶಕ್ ಗೌಡ.

ಪ್ರಸ್ತುತ ದರ್ಶಕ್ ಗೌಡ ‘ಕಾವ್ಯಾಂಜಲಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಶಿಲ್ಪಾ ರವಿ ಅವರು ‘ಜೀವ ಹೂವಾಗಿದೆ’ ಧಾರಾವಾಹಿ ಮಾಡುತ್ತಿದ್ದಾರೆ. ಫಿಟ್‌ನೆಸ್‌ ಹಾಗೂ ನಟನೆಯಲ್ಲಿಯೂ ಶಿಲ್ಪಾ ಕೆಲಸ ಮಾಡುತ್ತಿದ್ದರು. ಈಗಾಗಲೇ ಶಿಲ್ಪಾ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: