ಕ್ರೀಡೆಪ್ರಮುಖ ಸುದ್ದಿ

ಶೂಟರ್ ಅಭಿನವ್ ಬಿಂದ್ರಾ ದೆಹಲಿ ಹಾಫ್ ಮ್ಯಾರಥಾನ್‌ನ 16ನೇ ಆವೃತ್ತಿಯ ರಾಯಭಾರಿ

ದೇಶ( ನವದೆಹಲಿ)ನ.20:- ಭಾರತದ ಒಲಿಂಪಿಕ್ ಚಿನ್ನದ ಪದಕ ವಿಜೇತ ಶೂಟರ್ ಅಭಿನವ್ ಬಿಂದ್ರಾ ಅವರನ್ನು ನವೆಂಬರ್ 29 ರಂದು ರಾಷ್ಟ್ರ ರಾಜಧಾನಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯಲಿರುವ ಏರ್‌ಟೆಲ್ ದೆಹಲಿ ಹಾಫ್ ಮ್ಯಾರಥಾನ್‌ನ 16ನೇ ಆವೃತ್ತಿಯ ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ.

ದೆಹಲಿ ಹಾಫ್ ಮ್ಯಾರಥಾನ್ ‌ನ ಪ್ರವರ್ತಕ ಇಂಟರ್‌ನ್ಯಾಷನಲ್‌ನ ವ್ಯವಸ್ಥಾಪಕ ನಿರ್ದೇಶಕ ಅನಿಲ್ ಸಿಂಗ್ ಈ ಕುರಿತು ಮಾಹಿತಿ ನೀಡಿದ್ದಾರೆ.

ಭಾರತದ ಒಲಿಂಪಿಕ್ ಚಿನ್ನದ ಪದಕ ವಿಜೇತ ಬಿಂದ್ರಾ, 2008 ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ದೇಶದ ಅತ್ಯುನ್ನತ ಕ್ರೀಡಾ ಗೌರವ ರಾಜೀವ್ ಗಾಂಧಿ ಖೇಲ್ ರತ್ನ ಪಡೆದು ಇತಿಹಾಸ ನಿರ್ಮಿಸಿದರು. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: