ಮೈಸೂರು

ಮರಾಠಿ ಪ್ರಾಧಿಕಾರ ವಿರೋಧಿಸಿ ಡಿ.5ರಂದು ನಡೆಯುವ ಬಂದ್ ಗೆ ವಿವಿಧ ಸಂಘಟನೆಗಳ ಬೆಂಬಲ

ಮೈಸೂರು,ನ.20:- ಮರಾಠಿ ಪ್ರಾಧಿಕಾರ ವಿರೋಧಿಸಿ ಕರ್ನಾಟಕದಾದ್ಯಂತ ಬಂದ್ ಗೆ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ನಿನ್ನೆ ಸಭೆ ನಡೆಸಲಾಯಿತು.
ಹಲವಾರು ಸಂಘ-ಸಂಸ್ಥೆಗಳು ಭಾಗವಹಿಸಿ ಡಿಸಂಬರ್ 5 ರಂದು ನಡೆಯುವ ಬಂದ್ ಗೆ ಸಂಪೂರ್ಣವಾಗಿ ಬೆಂಬಲಿಸಿ ಬೆಂಬಲ ನೀಡುತ್ತೇವೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ. ವಿಜಯನಗರವನ್ನು ಹೊಸ ಜಿಲ್ಲೆ ಮಾಡುತ್ತಿರುವುದಕ್ಕೂ ವಿರೋಧ ವ್ಯಕ್ತ ಪಡಿಸಲಾಯಿತು. ಯಾವುದೇ ಕಾರಣಕ್ಕೂ ಪ್ರಾಧಿಕಾರ ಮತ್ತು ಮಂಡಳಿ ಆಗಬಾರದೆಂದು ಹೋರಾಟಗಾರರು ಒಕ್ಕೊರಲ ನಿರ್ಧಾರ ಕೈಗೊಂಡರು. ಮುಖ್ಯಮಂತ್ರಿಗಳು ತಮ್ಮ ಮಗನ ಭವಿಷ್ಯಕ್ಕಾಗಿ ಕರ್ನಾಟಕವನ್ನು ಮರಾಠಿಗರಿಗೆ ಮಾರಲು ಹೊರಟ್ಟಿದ್ದಾರೆ. ಇದ್ದನ್ನು ಖಂಡಿಸಿ ಡಿಸೆಂಬರ್ 5ಕ್ಕೆ ಬಂದ್ ಗೆ ಸಂಪೂರ್ಣ ಬೆಂಬಲವನ್ನು ನೀಡುತ್ತಿದ್ದೇವೆ ಎಂದರು.
ಸಭೆಯಲ್ಲಿ ಕನ್ನಡ ಕೇಂದ್ರ ಚಳುವಳಿ ಹೋರಾಟಗಾರರ ಒಕ್ಕೂಟ , ಮೈಸೂರು ಕನ್ನಡ ,ವೇದಿಕೆ , ಹೃದಯವಂತರ ಕನ್ನಡಿಗರ ಬಳಗ, ಸರ್ವಜನಾಂಗ ಹಿತರಕ್ಷಣಾ ಮಹಿಳಾ ವೇದಿಕೆ ,ಕರುನಾಡ ಸೇನೆ ,ಪುನೀತ್ ರಾಜಕುಮಾರ್ ಅಭಿಮಾನಿಗಳ ಬಳಗ ,ಬಾಳೆಹಣ್ಣು ವ್ಯಾಪಾರಿಗಳ ಸಂಘ, ಡಾಕ್ಟರ್ ರಾಜಕುಮಾರ್ ಕನ್ನಡ ಸಿನಿಮಾ ಮತ್ತಿತರ ಸಂಘಸಂಸ್ಥೆಗಳವರು ಪಾಲ್ಗೊಂಡಿದ್ದರು.
ಈ ಸಭೆಯಲ್ಲಿ ವೇದಿಕೆ ಅಧ್ಯಕ್ಷ ಎಸ್ .ಬಾಲಕೃಷ್ಣ ,ಮೂಗೂರು ನಂಜುಂಡಸ್ವಾಮಿ,ತಾಯೂರು ವಿಠಲಮೂರ್ತಿ ,ಪ್ಯಾಲೇಸ್ ಬಾಬು, ಗೋಪಿ, ಪರಿಸರ ಚಂದ್ರು, ಡಿಪಿ ಪರಮೇಶ್ವರ್ ಯಶೋದ ,ಮಹದೇವಸ್ವಾಮಿ ರವಿ ಮುಂತಾದವರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: