ಮೈಸೂರು

ನ.23ರಿಂದ ಪ್ರತಿ ಸೋಮವಾರ ರೈತರಿಗಾಗಿ ಆನ್ ಲೈನ್ ಸರಣಿ ಕಾರ್ಯಕ್ರಮ

ಮೈಸೂರು,ನ.20:- ಕೃಷಿ ಸಂವಹನ ವೇದಿಕೆ ಮೈಸೂರು ವತಿಯಿಂದ ಸುಸ್ಥಿರ ಕೃಷಿಗಾಗಿ ಸಾವಯವ ಕೃಷಿ ಕುರಿತು ರೈತರಿಗಾಗಿ ಆನ್ ಲೈನ್ ಸರಣಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಕೃಷಿ ಅಧಿಕಾರಿಗಳು ಮಾತನಾಡಿ ಕೃಷಿ ಸಂವಹನ ವೇದಿಕೆ ಆನ್ ಲೈನ್ ತರಬೇತಿಗಳ ಪ್ರಸ್ತುತ ಸನ್ನಿವೇಶದಲ್ಲಿ ವೇದಿಕೆಯ ಸಹಭಾಗಿಗಳು ಆಯೋಜಿಸುತ್ತಿರುವ ತರಬೇತಿಗಳ ಜೊತೆಗೆ ಪ್ರತಿ ಸೋಮವಾರ ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಕೃಷಿಯ ಒಂದು ನಿರ್ದಿಷ್ಟ ವಿಷಯದ ವಿವಿಧ ಆಯಾಮಗಳ ಬಗ್ಗೆ ಪರಿಪೂರ್ಣ ಮಾಹಿತಿಯನ್ನು ಹಂತಹಂತವಾಗಿ ನೀಡುವ ಸಾಪ್ತಾಹಿಕ ಸರಣಿ ಆನ್ ಲೈನ್ ತರಬೇತಿಗಳನ್ನು ವೇದಿಕೆಯಿಂದ ಆಯೋಜಿಸಲು ತೀರ್ಮಾನಿಸಲಾಗಿದೆ. ಸುಸ್ಥಿರ ಕೃಷಿಗಾಗಿ ಸಾವಯವ ಕೃಷಿ ಈ ವಿಷಯದೊಂದಿಗೆ ಶುಭಾರಂಭವಾಗಲಿದೆ ಎಂದರು.
ಸಾವಯವ ವಿಧಾನದಲ್ಲಿ ಬೆಳೆಯುವ ರೈತರ ಸಂಖ್ಯೆಯೂ ಹೆಚ್ಚಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಸಮಗ್ರವಾಗಿ ಸಾವಯವ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಸುಸ್ಥಿರ ಕೃಷಿ ಕಡೆಗೆ ಹೆಜ್ಜೆ ಇಡಲು ಅನುಕೂಲವಾಗುವಂತೆ ರೈತರಿಗೆ ಮಾಹಿತಿ ನೀಡಲು 12ಅಧಿವೇಷನಗಳ ಸಾಪ್ತಾಹಿಕ ಸರಣಿಯನ್ನು ಮೊದಲ ಸರಣಿಯಾಗಿ ಹಮ್ಮಿಕೊಳ್ಳಲಾಗಿದೆ ಎಂದರು.
ನ.23ರಂದು ಬೆಳಿಗ್ಗೆ 11ಗಂಟೆಗೆ ಜಿಲ್ಲಾ ಕೃಷಿ ತರಬೇತಿ ಕೇಂದ್ರ ನಾಗನಹಳ್ಳಿ ಇಲ್ಲಿ ತರಬೇತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಲಿದೆ. ಮೈಸೂರು ಜಿ.ಪಂ.ಅಧ್ಯಕ್ಷರಾದ ಪರಿಮಳಾ ಶ್ಯಾಂ ಕಾರ್ಯಕ್ರಮ ಉಸ್ಘಾಟಿಸಲಿದ್ದು , ಸಿಇಒ ಡಿ.ಭಾರತಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಹಾಸನ ಕೃಷಿ ವಿವಿ ಡೀನ್ ಡಾ.ದೇವಕುಮಾರ್ ಸರಣಿಯ ವಿಷಯದ ಕುರಿತು ಪ್ರಧಾನ ಭಾಷಣ ಮಾಡಲಿದ್ದಾರೆ. ಇದೇ ವೇಳೆ ಆತ್ಮ ಯೋಜನೆಯಡಿ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ವಿತರಣೆ ಹಾಗೂ ಸಾವಯವ ಕೃಷಿ ಪದ್ಧತಿಗಳ ಕುರಿತಂತೆ ರೈತರು- ವಿಜ್ಞಾನಿಗಳ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಈ ಸರಣಿ ತರಬೇತಿ ಕಾರ್ಯಕ್ರಮವನ್ನು ಝೂಮ್ ಆ್ಯಪ್ ಮೂಲಕ ಹಾಗೂ ಫೇಸ್ ಬುಕ್ ವೆಬ್ ಕಾಸ್ಟ್ ಮೂಲಕ ಏರ್ಪಡಿಸಲಾಗುತ್ತಿದ್ದು ತತ್ಸಂಬಂಧಿತ ಲಿಂಕ್ ಗಳು ಇಂತಿವೆ. ರೈತರು ಹಾಗೂ ಆಸಕ್ತರು ಪ್ರತಿ ಅಧಿವೇಶನದಲ್ಲಿಯೂ ಇದೇ ಲಿಂಕ್ ಗಳ ಮೂಲಕ ಭಾಗವಹಿಸಬಹುದು. ರೈತರು ಝೂಮ್ ಆ್ಯಪ್ ಡೌನ್ ಲೋಡ್ ಮಾಡಿಕೊಂಡು ಈ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಸಾಕು, ಮೀಟಿಂಗ್ ಐಡಿ, ಪಾಸ್ ಕೋಡ್ ಅವಶ್ಯಕತೆ ಇಲ್ಲ. Zoom meeting link : https://us02web.zoom.us/i/8628798697, facebook link https://www.facebook.com/krushi-Samvahana-Vedike-104055671520697/?ti=as ಇರಲಿದೆ.
ನ.30ರಂದು ಸಾವಯವ ಕೃಷಿಯ ಮಹತ್ವ ಮತ್ತು ಅವಕಾಶಗಳ ಕುರಿತು ಧಾರವಾಡ ಕೃಷಿ ವಿವಿಯ ಡಾ.ಬಬಲಾದ ಹೆಚ್.ಬಿ, ಡಿಸೆಂಬರ್ 7ರಂದು ಸಾವಯವ ಕೃಷಿಗೆ ಅಗತ್ಯ ಸಂಪನ್ಮೂಲಗಳ ಕ್ರೋಢೀಕರಣ ಹಾಗೂ ಅವಕಾಶಗಳು ನಾಗನಹಳ್ಳಿ ವಿಸ್ತರಣಾ ಶಿಕ್ಷಣ ಘಟಕದ ಡಾ,ರಾಮಚಂದ್ರ ಸಿ, ಡಿಸೆಂಬರ್ 14ರಂದು ಮಣ್ಣು ಮತ್ತು ಮಳೆ ನೀರಿನ ಸಂರಕ್ಷಣೆ ನಾಗನಹಳ್ಳಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ಕೃಷಿ ನಿರ್ದೇಶಕರು ಡಾ.ಯೋಗೇಶ್ ಜಿ.ಹೆಚ್, ಡಿ.21ರಂದು ಸಾವಯವ ಗೊಬ್ಬರಗಳು ಹಾಗೂ ಅವುಗಳ ತಯಾರಿಕಾ ವಿಧಾನ ನಾಗನ ಹಳ್ಳಿ ಕೃಷಿ ಸಂಶೋಧನಾ ಕೇಂದ್ರದ ಡಾ.ಪ್ರಕಾಶ್ ಪಿ, ಡಿ.28ರಂದು ಹಸಿರು ಮತ್ತು ಹಸಿರೆಲೆ ಗೊಬ್ಬರಗಳು ಪ್ರಗತಿಪರ ರೈತ ದೊಡ್ಡಲಿಂಗೇಗೌಡ ಹೆಚ್.ಕೆ, ನಾಗನಹಳ್ಳಿ ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ರವೀಂದ್ರ ಕೆ.ಆರ್ ವಿಷಯ ತಿಳಿಸಿಕೊಡಲಿದ್ದಾರೆ ಎಂದರು. (ಕೆ.ಎಸ್ ,ಎಸ್.ಎಚ್)

Leave a Reply

comments

Related Articles

error: