ಕ್ರೀಡೆಪ್ರಮುಖ ಸುದ್ದಿ

ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿ ಹಾಕಿ ಆಟಗಾರ ಎಂಪಿ ಸಿಂಗ್ ಗೆ ಸುನಿಲ್ ಗವಾಸ್ಕರ್ ಸಹಾಯ

ದೇಶ(ನವದೆಹಲಿ)ನ.20:- ಖ್ಯಾತ ಕ್ರಿಕೆಟ್ ಆಟಗಾರ ಸುನಿಲ್ ಗವಾಸ್ಕರ್ ಅವರ ‘ದಿ ಚಾಂಪ್ಸ್ ಫೌಂಡೇಶನ್’ ಹಾಕಿ ಒಲಿಂಪಿಯನ್ ಮೊಹಿಂದರ್ ಪಾಲ್ ಸಿಂಗ್ ಅವರಿಗೆ ಆರ್ಥಿಕ ಸಹಾಯ ನೀಡಿದೆ.
ಮೊಹಿಂದರ್ ಪಾಲ್ ಸಿಂಗ್ ಕೆಲವು ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಸುನೀಲ್ ಗವಾಸ್ಕರ್ ಅವರ ಸಂಸ್ಥೆ ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ಆರ್ಥಿಕ ಸಮಸ್ಯೆಗಳೊಂದಿಗೆ ಬಳಲುತ್ತಿರುವ ಆಟಗಾರರಿಗೆ ಸಹಾಯ ಮಾಡುತ್ತಿದೆ. ಎಂಪಿ ಸಿಂಗ್ ಎಂದೇ ಖ್ಯಾತರಾಗಿರುವ ಮೊಹಿಂದರ್ ಪಾಲ್ ಸಿಂಗ್ ಅವರು ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದು, ಡಯಾಲಿಸಿಸ್ನಲ್ಲಿದ್ದಾರೆ. ಕಸಿಗಾಗಿ ‘ದಾನಿ’ಗಳಿಗಾಗಿ ಕಾಯುತ್ತಿದ್ದಾರೆ.
“ಮಾಜಿ ಒಲಿಂಪಿಯನ್ ಮತ್ತು ಅಂತರರಾಷ್ಟ್ರೀಯ ಪದಕ ವಿಜೇತ ಎಂಪಿ ಸಿಂಗ್ ಅನಾರೋಗ್ಯದಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆಂದು ನಾನು ಮಾಧ್ಯಮಗಳಲ್ಲಿ ಓದಿದ್ದೆ. ಎಂಪಿ ಸಿಂಗ್ ಅವರ ಆರೋಗ್ಯದ ಬಗ್ಗೆಯೂ ನನಗೆ ಮಾಧ್ಯಮಗಳಿಂದ ಲೇ ತಿಳಿದು ಬಂತು. ಎಂಪಿ ಸಿಂಗ್ ಅವರು 1988 ರ ಸೋಲ್ ಒಲಿಂಪಿಕ್ಸ್ನಲ್ಲಿ ಭಾಗವಹಿಸಿದ್ದ ಭಾರತೀಯ ಹಾಕಿ ತಂಡದ ಪ್ರಮುಖ ಭಾಗವಾಗಿದ್ದರು. ಅವರು ಮೊಹಮ್ಮದ್ ಶಾಹಿದ್, ಎಂಎಂ ಸೋಮಯಾ, ಜೂಡ್ ಫೆಲಿಕ್ಸ್, ಪರ್ಗತ್ ಸಿಂಗ್ ಅವರೊಂದಿಗೆ ಆಡಿದ್ದಾರೆ. ಮಾಜಿ ಸ್ಟಾರ್ ಆಟಗಾರರಿಗೆ ಸಹಾಯ ಮಾಡುವಂತಹ ಯಾವುದೇ ಸಂಸ್ಥೆ ಇಲ್ಲ ಎಂದು ಭಾರತದ ಕ್ರಿಕೆಟ್ ಮಾಜಿ ನಾಯಕ ಗವಾಸ್ಕರ್ ಹೇಳಿದ್ದಾರೆ.
‘ಶಿಕ್ಷಣ, ಆರೋಗ್ಯ, ಮಕ್ಕಳು ಮತ್ತು ಹಿರಿಯ ನಾಗರಿಕರಿಗಾಗಿ ಅನೇಕ ಸಂಸ್ಥೆಗಳು ಇವೆ. ಆದರೆ ಮಾಜಿ ಅಂತಾರಾಷ್ಟ್ರೀಯ ಆಟಗಾರರಿಗೆ ಯಾರೂ ಇಲ್ಲ, ಆದ್ದರಿಂದ ವೈಯುಕ್ತಿಕ ಕೊಡುಗೆಯೊಂದಿಗೆ ಪ್ರತಿಷ್ಠಾನವನ್ನು ರಚಿಸುವ ಬಗ್ಗೆ ಯೋಚಿಸಿದೆ. ನಂತರ ನಾವು 1983 ರ ವಿಶ್ವಕಪ್ ತಂಡದ ಸದಸ್ಯರೊಂದಿಗೆ ‘ಡಬಲ್ ವಿಕೆಟ್ ಟೂರ್ನಮೆಂಟ್’ ಆಯೋಜಿಸಿದ್ದೇವು, ಇದರಲ್ಲಿ ಒಬ್ಬ ಕೈಗಾರಿಕೋದ್ಯಮಿ ಮತ್ತು ಕಾರ್ಪೊರೇಟ್ ಮುಖ್ಯಸ್ಥರು ದಾನ ಮಾಡಿದರು. ‘ಇಲ್ಲಿಯವರೆಗೆ, ಪ್ರತಿಷ್ಠಾನವು 21 ಮಾಜಿ ಆಟಗಾರರಿಗೆ ಸಹಾಯ ಮಾಡಿದೆ, ಇದರಲ್ಲಿ ಮಾಸಿಕ ಬೆಂಬಲ ಮತ್ತು ಅವರ ವೈದ್ಯಕೀಯ ವೆಚ್ಚಗಳನ್ನು ನೋಡಿಕೊಳ್ಳುವುದಾಗಿದೆ ಎಂದಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: