ಕ್ರೀಡೆಪ್ರಮುಖ ಸುದ್ದಿ

ಭಾರತ ಕ್ರಿಕೆಟ್ ತಂಡದ ವೇಗಿ ಮೊಹಮ್ಮದ್ ಸಿರಾಜ್ ಗೆ ಪಿತೃ ವಿಯೋಗ

ದೇಶ( ನವದೆಹಲಿ)ನ.21:- ಭಾರತ ಕ್ರಿಕೆಟ್ ತಂಡದ ವೇಗಿ ಮೊಹಮ್ಮದ್ ಸಿರಾಜ್ ಅವರ ತಂದೆ ಮೊಹಮ್ಮದ್ ಗೌಸ್ ಹೈದ್ರಾಬಾದ್ ನಲ್ಲಿ ನಿಧನರಾಗಿದ್ದಾರೆ.

ಅವರಿಗೆ 53 ವರ್ಷ ವಯಸ್ಸಾಗಿತ್ತು. ಅವರು ಕಳೆದ ಕೆಲವು ಸಮಯಗಳಿಂದ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಮೊಹಮ್ಮದ್ ಸಿರಾಜ್ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ತಂದೆಯ ಅಂತ್ಯಕ್ರಿಯೆಗೂ ಬಾರದ ಸ್ಥಿತಿಯಲ್ಲಿ ಇದ್ದಾರೆ. ಕ್ವಾರಂಟೈನ್ ನಿಯಮದ ಪ್ರಕಾರ ಸಿರಾಜ್ ಆಸ್ಟ್ರೇಲಿಯಾದಿಂದ ಬರಲು ಸಾಧ್ಯವಾಗುತ್ತಿಲ್ಲ.

ಈ ಕುರಿತು ಪ್ರತಿಕ್ರಿಯಿಸಿರುವ ಸಿರಾಜ್ ನಮ್ಮ ತಂದೆ ಯಾವಾಗಲೂ ನನ್ನ ಮಗ ನನ್ನ ದೇಶವನ್ನು ಹೆಮ್ಮೆ ಪಡುವಂತೆ ಮಾಡುತ್ತಾನೆ ಎಂದು ಹೇಳುತ್ತಿದ್ದರು, ಅವರಿಗಾಗಿ ನಾನು ಖಂಡಿತವಾಗಿಯೂ ಅದನ್ನು ಮಾಡಿಯೇ ಮಾಡುತ್ತೇನೆ. ನನಗಾಗಿ ಮತ್ತು ನನ್ನ ಕನಸಿಗಾಗಿ ನನ್ನಪ್ಪ ಆಟೋ ಓಡಿಸಿಕೊಂಡು ಬಹಳ ಕಷ್ಟಪಟ್ಟಿದ್ದಾರೆ. ನಾನು ನನ್ನ ಜೀವನದ ಪ್ರಮುಖ ಸಪೋರ್ಟ್ ನ್ನು ಕಳೆದುಕೊಂಡಿದ್ದೇನೆ. ನಾನು ದೇಶಕ್ಕಾಗಿ ಆಡಬೇಕು ಎಂದು ಅವರು ಕನಸು ಕಂಡಿದ್ದರು. ಎಲ್ಲೋ ಒಂದು ಕಡೆ ಅವರ ಕನಸ್ಸನ್ನು ನನಸು ಮಾಡಿದ್ದೇನೆ ಎಂಬ ಸಂತೋಷವಿದೆ. ಕೊಹ್ಲಿಯವರು ಮತ್ತು ರವಿಶಾಸ್ತ್ರಿಯವರು ಬಂದು ವಿಷಯ ಹೇಳಿದಾಗ ಶಾಕ್ ಆಯ್ತು ಎಂದು ಹೇಳಿಕೊಂಡಿದ್ದಾರೆ.


ಅವರ ತಂದೆ ಸಾವಿನ ಕುರಿತು ಟ್ವೀಟ್ ಮಾಡಿರುವ ಆರ್ ಸಿಬಿ, ‘ಮೊಹಮ್ಮದ್ ಸಿರಾಜ್ ಮತ್ತು ಅವರ ಕುಟುಂಬಕ್ಕೆ ಅವರ ತಂದೆಯ ಸಾವಿನ ಕುರಿತು ಸಂತಾಪ ಸೂಚಿಸುತ್ತೇವೆ. ಈ ಕಷ್ಟದ ಸಮಯದಲ್ಲಿ ಇಡೀ ಆರ್‌ಸಿಬಿ ಕುಟುಂಬ ನಿಮ್ಮೊಂದಿಗಿದೆ. ಸಿರಾಜ್ ಮಾಯಾನ್ ದೃಢವಾಗಿರಿ ಎಂದು ಟ್ಲೀಟ್ ಮಾಡಿದೆ. (ಏಜೆನ್ಸೀಸ್,ಎಸ್,ಎಚ್)

Leave a Reply

comments

Related Articles

error: