ಮೈಸೂರು

ಕಾನೂನಿನ ವಿದ್ಯಾರ್ಥಿಗೆ ಅರ್ಥಶಾಸ್ತ್ರದ ಬಗ್ಗೆಯೂ ಅರಿವಿರಬೇಕು: ಡಾ.ಸಿ.ಕೆ ರೇಣುಕಾಚಾರ್ಯ

ಮೈಸೂರಿನ ಕುವೆಂಪುನಗರದ ಜೆಎಸ್ಎಸ್ ಕಾನೂನು ಕಾಲೇಜಿನಲ್ಲಿ ಮಂಗಳವಾರ ‘ಆಂತರಿಕ ಶಿಸ್ತುಗಳಲ್ಲಿ ಕಾನೂನಿನ ಸ್ವರೂಪ- ಕಾನೂನುಪೂರ್ವ ವಿಷಯಗಳ ಮಹತ್ವ’ ಕುರಿತ ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಹಾಜನ ಸ್ನಾತಕೋತ್ತರ ಪದವಿ ಕೇಂದ್ರದ ನಿರ್ದೇಶಕ ಡಾ.ಸಿ.ಕೆ ರೇಣುಕಾಚಾರ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬ ಕಾನೂನು ವಿದ್ಯಾರ್ಥಿ ಆರ್ಥಿಕ ತತ್ವಗಳು,ತೆರಿಗೆ, ಜಿಎಸ್ ಟಿ ಬಗ್ಗೆ ತಿಳಿದಿರಬೇಕು. ಗಣನೆ/ಅಂದಾಜು ಕಾನೂನು ಮತ್ತು ಅರ್ಥಶಾಸ್ತ್ರದಲ್ಲಿ ಪ್ರಮುಖವಾಗುತ್ತದೆ. ಕಾನೂನಿನ ಅಧ್ಯಯನದಲ್ಲಿ ಆರ್ಥಿಕ ನೀತಿಗಳು ಮಹತ್ವದ ಪಾತ್ರ ವಹಿಸುತ್ತವೆ. ಇದು ಒಂದು ಆಂತರಿಕ ಶಿಸ್ತಿನ ವಿಷಯವಾಗಿದ್ದು, ಮೌಲ್ಯಗಳು, ಆಚರಣೆಗಳು, ಸಂಪ್ರದಾಯಗಳ ಬಗ್ಗೆ ತಿಳಿಸಿಕೊಡುತ್ತದೆ. ಅಲ್ಲದೇ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಶಕ್ತಿಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ಹೇಳಿದರು.

ಕಾಲೇಜಿನ ಪ್ರಧಾನ ಕಾರ್ಯದರ್ಶಿ ಪ್ರೊ.ಕೆ.ಎಸ್.ಸುರೇಶ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಎಂ.ಪ್ರಭುಸ್ವಾಮಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. (ಎಲ್.ಜಿ-ಎಸ್.ಎಚ್)

Leave a Reply

comments

Related Articles

error: