ದೇಶಪ್ರಮುಖ ಸುದ್ದಿ

ಕಮಿಷನ್ ವಿವಾದ : ಪೆಟ್ರೋಲ್ ಬಂಕ್‍ಗಳು ಭಾನುವಾರದಂದು ರಜೆ ಮಾಡುವ ಸಾಧ್ಯತೆ

ನವದೆಹಲಿ : ಕೇಂದ್ರ ಸರ್ಕಾರ ಮತ್ತು ಪೆಟ್ರೋಲ್ ಪಂಪ್ ಮಾಲೀಕರ ಸಂಘದ ನಡುವೆ ಉಂಟಾಗಿರುವ ಕಮಿಷನ್ ವಿವಾದದಲ್ಲಿ ಗ್ರಾಹಕರು ಪರಿತಪಿಸಬೇಕಾಗುವ ಸಾಧ್ಯತೆ ಇದೆ. ಏಕೆಂದರೆ, ಸರ್ಕಾರ ಪೆಟ್ರೋಲ್‌, ಡಿಸೇಲ್ ಮಾರಾಟದ ಮೇಲಿನ ಕಮಿಷನ್ ಹೆಚ್ಚಿಸದೆ ಇದ್ದಲ್ಲಿ ಮೇ 10 ರ ನಂತರ ಪ್ರತಿ ಭಾನುವಾರ ರಜೆ ಪಡೆಯುತ್ತೇವೆ.  ದಿನಕ್ಕೆ 8 ಗಂಟೆ ಮಾತ್ರ ಕೆಲಸ ಮಾಡುವುದಾಗಿ ಪೆಟ್ರೋಲ್ ಬಂದ್ ಮಾಲೀಕರ ಸಂಘ ಎಚ್ಚರಿಕೆ ನೀಡಿದೆ.

ಮೇ 10ನೇ ತಾರೀಖನ್ನು “ನೋ ಪರ್ಚೇಸ್ ಡೇ” ಎಂದು ಆಚರಿಸುವುದಾಗಿ ಭಾರತೀಯ ಪೆಟ್ರೋಲಿಯಂ ವಿತರಕರ ಒಕ್ಕೂಟದ (CPID) ಸಭೆಯಲ್ಲಿ ನಿರ್ಧರಿಸಲಾಗಿದ್ದು, ಮೇ 10ರ ನಂತರ ದೇಶಾದ್ಯಂತ ಎಲ್ಲ ಪೆಟ್ರೋಲ್ ಬಂಕ್‍ಗಳಲ್ಲೂ ಕೇವಲ 8 ಗಂಟೆ ಮಾತ್ರ ಕೆಲಸ ಮಾಡುವುದಾಗಿ ತಿಳಿಸಿದೆ. ತೈಲ ಕಂಪನಿಗಳು ಡೀಲರ್ ಕಮಿಷನ್ ಹೆಚ್ಚಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಜನವರಿ ತಿಂಗಳಲ್ಲಿ ಕೈಗೊಂಡಿದ್ದ ಮುಷ್ಕರ ಕೈ ಬಿಡಲಾಯಿತು. ಆದರೆ 4 ತಿಂಗಳು ಕಳೆದರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂಬುದು ಪೆಟ್ರೋಲ್ ಡೀಲರ್ಸ್ ಅಸೋಸಿಯೇಶನ್ ಆರೋಪವಾಗಿದೆ.

(ಎನ್‍.ಬಿ.ಎನ್‍)

Leave a Reply

comments

Related Articles

error: