ಮೈಸೂರು

ಏ.15-16: ಜ್ಯೋತಿಷ್ಯ ಹಾಗೂ ಹಸ್ತ ಸಾಮುದ್ರಿಕ ರಾಷ್ಟ್ರೀಯ ಸಮ್ಮೇಳನ

ಜ್ಯೋತಿಷ್ಯ ಹಾಗೂ ಹಸ್ತ ಸಾಮುದ್ರಿಕ ಶಾಸ್ತ್ರಗಳ ರಾಷ್ಟ್ರೀಯ ಮಟ್ಟದ ಸಮ್ಮೇಳನವನ್ನು ಮೈಸೂರಿನ ಮಾಯಕಾರ ಗುರುಕುಲ ಹಾಗೂ ಕರ್ನಾಟಕ ರಾಜ್ಯ ಜ್ಯೋತಿಷಿಗಳು ಹಾಗೂ ಜ್ಯೋತಿಷಿ ಸಂಸ್ಥೆಗಳ ಒಕ್ಕೂಟದ ಸಹಯೋಗದೊಂದಿಗೆ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಮಧು ದೀಕ್ಷಿತ್  ತಿಳಿಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಏ.15 ಮತ್ತು 16ರಂದು, ಎರಡು ದಿನಗಳ ಕಾಲ ಕಲಾಮಂದಿರದಲ್ಲಿ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಏ.15ರ ಬೆಳಿಗ್ಗೆ 10ಕ್ಕೆ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ  ಚಾಲನೆ ನೀಡುವರು. ಶಿವರಾತ್ರೀಶ್ವರ ಪಂಚಾಂಗ ಕರ್ತೃ ಸಿದ್ಧಾಂತಿ ಕೆ.ಜಿ.ಪುಟ್ಟಹೊನ್ನಯ್ಯ ಅಧ್ಯಕ್ಷತೆ ವಹಿಸುವರು, ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಪಾಲ್ಗೊಳ್ಳುವರು, ಸಚಿವ ಈಶ್ವರ ಬಿ.ಖಂಡ್ರೆ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು, ಉಜ್ಜಯಿನಿ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಹಾಗೂ ಇತರ ಮಠಾಧೀಶರು ಸಾನಿಧ್ಯ ವಹಿಸುವರು ಎಂದರು.

ಏ.16ರ ಸಮಾರೋಪ ಸಮಾರಂಭವನ್ನು ಮಾಜಿ ಸಚಿವ ಎಸ್.ಎ.ರಾಮದಾಸ್ ಉದ್ಘಾಟಿಸುವರು. ಸಂಸದ ಪ್ರತಾಪ್ ಸಿಂಹ, ಸಹಕಾರಿ ಯೂನಿಯನ್ ಅಧ್ಯಕ್ಷ ಹೆಚ್.ವಿ.ರಾಜೀವ್, ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಷಡಾಕ್ಷರಿ ಸ್ವಾಮಿ ಹಾಗೂ ಇತರರು ಪಾಲ್ಗೊಳ್ಳುವರು. ತುಮಕೂರು ಚಿಕ್ಕಪೇಟೆಯ ಹಿರೇಮಠದ ಶಿವಾನಂದ ಶಿವಾಚಾರ್ಯ ಶ್ರೀಗಳು ಸಾನಿಧ್ಯ ವಹಿಸುವರು.ಕಾರ್ಯಕ್ರಮದಲ್ಲಿ ಜ್ಯೋತಿಷ್ಯ ತಜ್ಞರು ಹಾಗೂ ವೈದ್ಧಾಂತಿಕ ವಿದ್ವಾಂಸರುಗಳು ಪಾಲ್ಗೊಂಡು ಉಪನ್ಯಾಸ ಮಂಡಿಸುವರು. ಸಮ್ಮೇಳನದಲ್ಲಿ 2 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹಿರಿಯ ಜ್ಯೋತಿಷಿ ಡಾ.ಭಾನುಪ್ರಕಾಶ್ ಶರ್ಮ, ಡಾ.ಎಂ.ಜಿ.ಆರ್.ಅರಸ್, ರಾಮನಾಥ್ ಗುಪ್ತಾ, ಕೇಶವಮೂರ್ತಿ  ಹಾಜರಿದ್ದರು. (ಕೆ.ಎಂ.ಆರ್-ಎಸ್.ಎಚ್)

Leave a Reply

comments

Related Articles

error: